ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಈ ಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಕೂಡ ಭಾಗಿಯಾಗಿದ್ದಾರೆ. ಸದ್ಯಕ್ಕೆ ಯಾತ್ರೆ ಮಧ್ಯಪ್ರದೇಶದಲ್ಲಿ ಸಾಗುತ್ತಿದೆ. ಈ ವೇಳೆ ರಾಹುಲ್ ಗಾಂಧಿಯನ್ನು ನೋಡುವುದಕ್ಕೆ ಜನ ಜಂಗುಳಿ ಉಂಟಾಗಿದ್ದು, ಈ ಜನಜಂಗುಳಿ ನಡುವೆ ವೇಣುಗೋಪಾಲ್ ಕೈ ಮುರಿದುಕೊಂಡಿದ್ದಾರೆ.
ರಾಹುಲ್ ಗಾಂಧಿಯನ್ನು ನೋಡಲು, ಮಾತನಾಡಿಸಲು, ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ನುಗ್ಗಿದ್ದಾರೆ. ಜೊತೆಯಲ್ಲಿಯೇ ಇದ್ದ ವೇಣುಗೋಪಾಲ್ ಅವರನ್ನು ತಳ್ಳಿಕೊಂಡು ಹೋಗಿದ್ದಾರೆ. ಇದರ ಪರಿಣಾಮ ಕೆಳಗೆ ಬಿದ್ದಿದ್ದು, ಮೊಕಾಲು ಹಾಗೂ ಕೈಗೆ ಗಾಯವಾಗಿದೆ.
ತಕ್ಷಣ ಜೊತೆಯಲ್ಲಿಯೇ ಇದ್ದ ವೈದ್ಯರು ಪರೀಕ್ಷಿಸಿದ್ದಾರೆ. ಈ ವೇಳೆ ಮೂಳೆ ಫ್ರಾಕ್ಚರ್ ಆಗಿರುವುದು ಗಮನಕ್ಕೆ ಬಂದಿದೆ ಕೂಡಲೇ ವೈದ್ಯರು ಗಮನ ಹರಿಸಿ ಚಿಕಿತ್ಸೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2023ರ ಚುನಾವಣೆಯನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ಅಧಿಕಾರಕ್ಕೆ ಪಕ್ಷವನ್ನು ಮತ್ತೆ ತರಬೇಕು ಅಂತ ಪಣ ತೊಟ್ಟಿದ್ದಾರೆ. ಅದರ ಫಲವಾಗಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ.