ಚಿತ್ರದುರ್ಗ, (ನ.26) : ನಮ್ಮ ದೇಶದ ಸಂವಿಧಾನ ಇಡೀ ಜಗತ್ತಿನಲ್ಲಿ ವಿಶಿಷ್ಟವಾದ , ವಿಭಿನ್ನವಾದ ಮತ್ತು ದೊಡ್ಡದಾದ ಸಂವಿಧಾನ ಎಂದು ಕೆ.ಎಂ. ವೀರೇಶ್ ಹೇಳಿದರು
ನಗರದ ಹೊರವಲಯದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಆಚರಿಸಲಾದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಮಾನವ ಹೇಗೆ ಶಾಂತಿಯಿಂದ ಜೀವನ ನಡೆಸಬೇಕು ಎನ್ನುವುದನ್ನು ಕಾನೂನುಗಳ ಮೂಲಕ ತಿಳಿಸಿಕೊಡುತ್ತದೆ. ಮಹತ್ವದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಮಹನೀಯರನ್ನು ಸ್ಮರಿಸುವ ದಿನ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಪೂಜಿ ಶಾಲೆಯ ಮಕ್ಕಳು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಅರ್ಥಮಾಡಿ ಸುವ ನೃತ್ಯ ರೂಪಕಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು , ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.