ಎಲೆಕ್ಷನ್ ನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಎಪಿ ನಾಯಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ ಎಲೆಕ್ಷನ್ ಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಎಎಪಿ ನಾಯಕ ಸಂದೀಪ್ ಭಾರದ್ವಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾರದ್ವಾಜ್ ಅವರಿಗೆ 55 ವರ್ಷ ವಯಸ್ಸಾಗಿತ್ತು. ದೆಹಲಿಯ ರಾಜೋರಿ ಗಾರ್ಡನ್ ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂದೀಪ್ ಭಾರದ್ವಾಜ್ ಆಪ್ ಪಕ್ಷ ಸ್ಥಾಪನೆಯಾದಾಗಿನಿಂದ ಕಾರ್ಯಕರ್ತರಾಗಿದ್ದರು. ಬಳಿಕ 2012ರಲ್ಲಿ ಟಿಕೆಟ್ ಇನ್ನೇನು ಸಿಗುವಷ್ಟರಲ್ಲಿತ್ತು. ಆದ್ರೆ ಕೊನೆಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಈ ಬಾರಿಯಾದರೂ ಟಿಕೆಟ್ ಸಿಗಬಹುದು ಎಂದು ಕೊಂಡಿದ್ದರು. ಆ ಆಸೆಯಿಂದಾನೆ ಚುನಾವಣಾ ಕೆಲಸದಲ್ಲಿ ಕಾರ್ಯನಿರ್ವಹಿಸಿದ್ದರು. ಆದ್ರೆ ನತಾದೃಷ್ಟ ಎಂಬಂತೆ ಈ ಬಾರಿಯೂ ಟಿಕೆಟ್ ಮಿಸ್ ಆಗಿತ್ತು.
ಇದರಿಂದ ನೊಂದ ಭಾರದ್ವಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂದೀಪ್ ಭಾರದ್ವಾಜ್ ಅವರ ಸಾವಿನಿಂದ ಕುಟುಂಬಸ್ಥರು ದುಃಖದಲ್ಲಿದ್ದಾರೆ. ಭಾರದ್ವಾಜ್ ಅವರ ಸಾವಿಗೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಂತಾಪ ಸೂಚಿಸಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.