ಕಾಂತಾರ ಸಿನಿಮಾ ದೇಶಾದ್ಯಂತ ಸಕ್ಸಸ್ ಕಾಣುತ್ತಿದೆ. ನಿನ್ನೆಯಿಂದ ಒಟಿಟಿಯಲ್ಲೂ ಸ್ಟ್ರೀಮ್ ಆಗುತ್ತಿದೆ. ಆದ್ರೆ ಮೊದಲಿಗೆ ಹಾಗೂ ಕೊನೆಯಲ್ಲಿ ಬರುವ ವರಾಹ ರೂಪಂ ಹಾಡನ್ನು ತೆಗೆಯಲಾಗಿದೆ. ಒಟಿಟಿಯಲ್ಲೂ ಕೂಡ ವರಾಹ ರೂಪಂ ಹಾಡು ಡಿಲೀಟ್ ಮಾಡಲಾಗಿತ್ತು. ಆದ್ರೆ ಇದೀಗ ಹೊಂಬಾಳೆ ಫಿಲಂಸ್ಗೆ ಮೊದಲ ಹೆಜ್ಜೆಯಲ್ಲಿಯೇ ಸಕ್ಸಸ್ ಸಿಕ್ಕಿದೆ.
ಸಿನಿಮಾಗಳಲ್ಲಿ ವರಾಹ ರೂಪಂ ಹಾಡು ಬಳಕೆ ಮಾಡಿದಂತೆ ಇನ್ನು ಮುಂದೆಯೂ ಮಾಡಬಹುದು ಎಂದು ಕೋರ್ಟ್ ಅನುಮತಿ ನೀಡಿದೆ. ತೈಕುಡಂ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಕೇರಳದ ಕೋಝಿಕ್ಕೋಡ್ ಸಂಸ್ಥೆ ವಜಾ ಮಾಡಿದೆ. ಈ ಸಂಬಂಧ ತಮ್ಮ ಪೇಸ್ ಬುಕ್ ನಲ್ಲಿ ಬರೆದುಕೊಂಡಿರುವ ವರಾಹ ಹಾಡಿನ ಬರಹಗಾರ ಶಶಿಧರ್ ಕಾವೂರ್, ವರಾಹ ರೂಪಂ ಹಾಡಿಗೆ ಸಂಬಂಧಿಸಿದಂತೆ ತೈಕುಡಂ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಕೋರ್ಟ್, ತೈಕುಡಂ ಸಂಸ್ಥೆಯ ಅರ್ಜಿಯನ್ನು ವಜಾ ಮಾಡಿದೆ.
ತೈಕುಡಂ ಸಂಸ್ಥೆಯವರು ಇದು ನಮ್ಮ ಹಾಡಿನ ಸಾಮ್ಯತೆಯನ್ನೇ ಹೊಂದಿದೆ ಎಂದು ವರಾಹ ರೂಪಂ ಹಾಡಿನ ವಿರುದ್ಧ ಕೇಸ್ ಹಾಕಿದ್ದರು. ಹಾಡಿನ ಕೃತಿ ಚೌರ್ಯ ನಡೆದಿದೆ ಎಂದು ಕೇಸ್ ಹಾಕಿತ್ತು. ಇದನ್ನು ವಿಚಾರಣೆ ನಡೆಸಿದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ, ಹಾಡು ಬಳಸದಂತೆ ಆದೇಶ ಹೊರಡಿಸಿತ್ತು. ಇದೀಗ ಕೇರಳದ ನ್ಯಾಯಾಲಯ ಅರ್ಜಿ ತಿರಸ್ಕರಿಸಿ, ಹಾಡು ಬಳಕೆಗೆ ಅನುಮತಿ ನೀಡಿದೆ.