ಚಿತ್ರದುರ್ಗ, (ನ.24): ಕನ್ನಡನಾಡು ಹಲವು ಸಂಸ್ಕೃತಿಗಳ ನೆಲೆವೀಡು. ಸಮೃದ್ಧವಾದ ನಾಡಲ್ಲಿ ನೆಲೆಸಿರುವ ನಾವುಗಳು ಪುಣ್ಯವಂತರು. ಸಾಹಿತ್ಯ ಮತ್ತು ಸಾಂಸ್ಕøತಿಕ ನೆಲೆವೀಡಾದ ಕನ್ನಡದ ನೆಲದಲ್ಲಿ ಅಕ್ಷರಸಂಪತ್ತು, ವನ್ಯಸಂಪತ್ತು, ಜಲಸಂಪತ್ತು, ಕಲಾಸಂಪತ್ತಿನಿಂದ ಕೂಡಿದ ಆಶ್ರಯತಾಣ ನಮ್ಮದಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಅಭಿಪ್ರಾಯಪಟ್ಟರು.
ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ನನ್ನನಾಡು ನನ್ನಹಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಎಲ್ಲಾ ಭಾಷೆಗಳಿಗಿಂತ ಭಾವನೆ ಮತ್ತು ಅಭಿವ್ಯಕ್ತಿಗಳಿಂದ ಕೂಡಿದ ಭಾಷೆಯಾಗಿದೆ. ಪ್ರಾಥಮಿಕ ಹಂತದ ಮಕ್ಕಳಿಗೆ ಕನ್ನಡ ಭಾಷೆ ಮತ್ತು ಅದರ ಕೌಶಲ್ಯವನ್ನು ಅರ್ಥೈಸುವ ಕಾರ್ಯ ನಡೆಯಬೇಕಿದೆ. ಕನ್ನಡ ನಾಡಗೀತೆಗಳಲ್ಲಿ ಅಡಗಿರುವ ಸಾರ ಮತ್ತು ವೈಭವವನ್ನು ಪ್ರತಿಯೊಬ್ಬರೂ ಮೆಲುಕು ಹಾಕುವಂತಾಗಬೇಕು ಎಂದರು.
ಶ.ಸಾ.ಪ ಜಿಲ್ಲಾ ಕಾರ್ಯದರ್ಶಿ ಹುರುಳಿ ಬಸವರಾಜ್ ಕನ್ನಡನಾಡಿನ ಸಾಹಿತ್ಯ ಲೋಕದ ಬಗ್ಗೆ ಉಪನ್ಯಾಸ ನೀಡುತ್ತ ಕನ್ನಡ ಎಲ್ಲಾ ಭಾಷೆಗಳಿಗಿಂತ ಶ್ರೀಮಂತ ಭಾಷೆಯಾಗಿದೆ. ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು, ಸಾಹಿತಿಗಳು, ಕಲಾವಿದರು ಇರುವ ನಾಡಿನಲ್ಲಿ ನಾಡಗೀತೆಗಳನ್ನು ಹಾಡುವ ಮೂಲಕ ತಾಯಿ ಭುವನೇಶ್ವರಿಯನ್ನು ನೆನೆಸಿಕೊಳ್ಳುವ ಜವಾಬ್ದಾರಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಸಾಂಸ್ಕøತಿಕ ಹಾಗೂ ಸಾಹಿತ್ಯಿಕ ನೆಲೆಗಟ್ಟಿನಲ್ಲಿ ಕಂಡರೆ ಉತ್ತಮ ಭವಿಷ್ಯದ ಮಾರ್ಗದರ್ಶಕರಾಗುತ್ತಾರೆ ಎಂದರು.
ಮುಖ್ಯಶಿಕ್ಷಕ ಬಿ.ವಿ.ನಾಥ್ ಅಧ್ಯಕ್ಷತೆ ವಹಿಸಿದ್ದರು. ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಸ.ಹಿ.ಪ್ರಾ ಶಾಲೆ ಮುಖ್ಯಶಿಕ್ಷಕ ಉಮೇಶ್ ಮುಂತಾದವರು ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ರಂಗನಿರ್ದೇಶಕ ಕೆಪಿಎಂ.ಗಣೇಶಯ್ಯ ರಾಷ್ಟ್ರಕವಿ ಕುವೆಂಪುರವರ ನಾಡಗೀತೆ, ರೈತಗೀತೆ, ಹುಯಿಲುಗೋಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ದ.ರಾ.ಬೇಂದ್ರೆ ಬರೆದ ಬಟ್ಟೆಯಲ್ಲ ಬಣ್ಣವಲ್ಲ ಬೆಳಕಿನ ಈಟಿ, ಬಂಕಿಮಚಂದ್ರ ಚಟರ್ಜಿ ವಿರಚಿತ ವಂದೇಮಾತರಂ, ರಾಷ್ಟ್ರಕವಿ ರವೀಂದ್ರನಾಥ ಠ್ಯಾಗೋರರ ರಾಷ್ಟ್ರಗೀತೆ ಮುಂತಾದ ಗೀತೆಗಳನ್ನು ತರಬೇತಿ ನೀಡಿದರು. ಜ್ಯೋತಿ ಎನ್ ಸ್ವಾಗತಿಸಿದರು. ಸತೀಶ್‍ಬಾಬು ನಿರೂಪಿಸಿದರು. ಅಮೂಲ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು.