ರಿಲಯನ್ಸ್ ಪ್ರಪಂಚದಾದ್ಯಂತ ತನ್ನ ವ್ಯಾಪಾರ ವಿಸ್ತರಿಸಲು ಕೆಲಸಗಳು ನಡೆತುತ್ತಿವೆ. ಇದೀಗ ಭಾರತದ ಮತ್ತೊಂದು ಬೃಹತ್ ಕಂಪನಿಯ ಸ್ವಾಧೀನಕ್ಕೆ ಮುಂದಾಗಿದೆ. ಅದುವೆ ಮೆಟ್ರೋ ಕಂಪನಿ. ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಜರ್ಮನಿಯದ್ದು, ಈಗಾಗಲೇ ಇಂಡಿಯಾ್ ಸ್ವಾಧೀನದ ಒಪ್ಪಂದಕ್ಕೆ ಈಗಾಗಲೇ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಹಾಗೂ ಮೆಟ್ರೋ ನಡುವೆ ಕಳೆಷ ಕೆಲವು ತಿಂಗಳಿನಿಂದ ಚರ್ಚೆಗಳು ನಡೆಯುತ್ತಿವೆ. ಜರ್ಮನಿಯ ಮೂಲ ಸಂಸ್ಥೆಯೂ ರಿಲಾಯನ್ಸ್ ರಿಟೇಲ್ ನಿಂದ ಸಲ್ಲಿಸಿದ ಪ್ರಸ್ತಾಪವನ್ನು ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸುತ್ತಿವೆ. ರಿಲಾಯನ್ಸ್ ಇಂಡಸ್ಟ್ರೀಸ್ ಸುಮಾರು 500 ಮಿಲಿಯನ್ ಯುರೋಗಳು ಅಂದರೆ ಭಾರತದ ರೂಪಾಯಿಗಳಲ್ಲಿ 4,060 ಕೋಟಿ ಅಂದಾಜಿನಲ್ಲಿ ಒಪ್ಪಂದದಲ್ಲಿ ಮೆಟ್ರೊ ಕ್ಯಾಶ್ ಅಂಡ್ ಕ್ಯಾರಿಯ ವ್ಯವಹಾರವನ್ನು ಭಾರತದಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಸಿದ್ಧವಾಗಿದೆ ಎಂಬ ಮಾಹಿತಿ ಇದೆ.
ಈ ಸಂಬಂಧ ಪ್ರತಿಕ್ರಿಯೆ ನೀಡುವುದಕ್ಕೆ ಮೆಟ್ರೋ ಹಾಗೂ ರಿಲಾಯನ್ಸ್ ಎರಡು ಸಂಸ್ಥೆಯ ಮಾಲೀಕರು ನಿರಾಕರಿಸಿದ್ದಾರೆ. 34 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರೋ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, 2003ರಲ್ಲಿ. ಬೆಂಗಳೂರಿನಲ್ಲಿ ಆರು, ಹೈದ್ರಾಬಾದ್ ನಲ್ಲಿ ನಾಲ್ಕು, ಮುಂಬೈ, ದೆಹಲಿಯಲ್ಲಿ ತಲಾ ಎರಡು ಸೇರಿದಂತೆ ಅನೇಕ ಕಡೆ ತನ್ನ ಬ್ರಾಂಚ್ ಹೊಂದಿದೆ.