ನಕ್ಷತ್ರ’ ನಟಿ ಜೊತೆಗೆ ಬಿಗ್ ಬಾಸ್ ವಿನ್ನರ್ ಮದುವೆ : ಸುದ್ದಿ ಕೇಳಿ ಶೈನ್ ಶೆಟ್ಟಿ ಏನಂದ್ರು..?

suddionenews
1 Min Read

 

ನಟ ಶೈನ್ ಶೆಟ್ಟಿ ಹಾಗೂ ನಕ್ಷತ್ರ ಧಾರಾವಾಹಿಯಲ್ಲಿ ವಿಲನ್ ಆಗಿ ಅಬ್ಬರಿಸುತ್ತಿರುವ ಸುಕೃತ ನಾಗ್ ಇಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿ ಬಹಳ ಜೋರಾಗಿಯೇ ಹಬ್ಬಿತ್ತು. ಇಬ್ಬರು ಸದ್ಯದಲ್ಲಿಯೇ ಹೊಸ ಜೀವನ ಶುರು ಮಾಡಲಿದ್ದಾರೆ ಎನ್ನಲಾಗುತ್ತಿತ್ತು. ಈ ಬಗ್ಗೆ ನಟ, ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಒಂದೇ ಫೀಲ್ಡ್ ನಲ್ಲಿರುವ ಕಾರಣ ನನಗೂ ಸುಕೃತಾಗೂ ಪರಿಚಯ ವಿದೆ. ಆದರೆ ಸಂಪರ್ಕವಿಲ್ಲ. ಇಬ್ಬರು ಇದುವರೆಗೂ ಭೇಟಿಯೂ ಆಗಿಲ್ಲ, ಮಾತುಕತೆಯನ್ನು ನಡೆಸಿಲ್ಲ. ಆದರೂ ಈ ರೀತಿಯಾದ ವಿಚಾರ ಸ್ಪ್ರೆಡ್ ಆಗಿದೆ. ದಯವಿಟ್ಟು ಈ ರೀತಿಯೆಲ್ಲಾ ಅಪಪ್ರಚಾರ ಮಾಡವೇಡಿ ಎಂದಿದ್ದಾರೆ.

ಸದ್ಯ ನಾನು ನನ್ನ ಕೆರಿಯರ್ ನತ್ತ ಗಮನ ಹರಿಸಿದ್ದೇನೆ. ಇಂಥ ಸುದ್ದಿಯನ್ನೆಲ್ಲ ಹಬ್ಬಿಸಬೇಡಿ. ಮದುವೆ ಬಗ್ಗೆ ನಾನು ಇನ್ನು ಆಲೋಚನೆ ಕೂಡ ಮಾಡಿಲ್ಲ ಎಂದಿದ್ದಾರೆ. ಈ ಮೂಲಕ ಸುಕೃತಾ ನಾಗ್ ಜೊತೆಗಿನ ಗಾಸಿಪ್ ಸುದ್ದಿಗೆ ಎಳ್ಳು ನೀರು ಬಿಟ್ಟಿದ್ದಾರೆ. ಶೈನ್ ಶೆಟ್ಟಿ, ಪುನೀತ್ ಅವರ ಅಪ್ಪು ಹಾಗೂ ರಿಷಬ್ ಅವರ ಕಾಂತಾರ ಸಿನಿಮಾದಲ್ಲಿ ನಟಿಸಿದ್ದರು. ಇನ್ನಷ್ಟು ಬೇರೆ ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *