ನವದೆಹಲಿ : 1985 ರ ಬ್ಯಾಚ್‌ನ ಪಂಜಾಬ್ ಕೇಡರ್ ಅಧಿಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಒಂದು ದಿನದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದಾರೆ.
“ಶ್ರೀ ಅರುಣ್ ಗೋಯೆಲ್, ಐಎಎಸ್ (ನಿವೃತ್ತ) (ಪಿಬಿ: 1985) ಅವರನ್ನು ಚುನಾವಣಾ ಆಯೋಗದಲ್ಲಿ ಚುನಾವಣಾ ಆಯುಕ್ತರನ್ನಾಗಿ ನೇಮಿಸಲು ರಾಷ್ಟ್ರಪತಿಗಳು ಆದೇಶಿಸಿರುತ್ತಾರೆ. ಮತ್ತು ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ” ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮೂವರು ಸದಸ್ಯರಿರುವ ಚುನಾವಣಾ ಆಯೋಗದಲ್ಲಿ ಗೋಯೆಲ್ ಅವರು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಅವರಿರುವ ಚುನಾವಣಾ ಸಮಿತಿಯಲ್ಲಿ ಅವರಿಬ್ಬರ ಜೊತೆಗೆ ಇವರನ್ನೂ ಸಹ ನೇಮಿಸಲಾಗಿದೆ.
ತ್ರಿಸದಸ್ಯ ಆಯೋಗದಲ್ಲಿ ಒಬ್ಬ ಚುನಾವಣಾ ಆಯುಕ್ತರ ಹುದ್ದೆಯು ಮೇ 15 ರಿಂದ ಖಾಲಿಯಾಗಿದೆ. ಆಗಿನ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸುಶೀಲ್ ಚಂದ್ರ ಅವರು ಹುದ್ದೆಯಿಂದ ನಿವೃತ್ತರಾದ ನಂತರ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.
ಗೋಯೆಲ್ ಅವರು ಶುಕ್ರವಾರದವರೆಗೆ ಭಾರೀ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು. ಅವರು ಸ್ವಯಂ ನಿವೃತ್ತಿ ಪಡೆದರು. ಅವರ ಸ್ಥಾನಕ್ಕೆ ಉತ್ತರ ಪ್ರದೇಶ ಕೇಡರ್ ಅಧಿಕಾರಿ ಕಮ್ರಾನ್ ರಿಜ್ವಿ ಅವರನ್ನು ನೇಮಿಸಿದ ಕ್ಯಾಬಿನೆಟ್ ನೇಮಕಾತಿ ಸಮಿತಿಯ ಆದೇಶದ ಪ್ರಕಾರ ಅವರು ಡಿಸೆಂಬರ್ 31 ರಂದು ನಿವೃತ್ತರಾಗುವ ನಿರೀಕ್ಷೆಯಿದೆ.
2019 ರಲ್ಲಿ ಭಾರೀ ಕೈಗಾರಿಕೆಗಳ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು, ಗೋಯೆಲ್ ಅವರು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು. ಅವರು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿಯೂ ಸಹಾ ಸೇವೆ ಸಲ್ಲಿಸಿದ್ದಾರೆ .