ಬೆಂಗಳೂರು: ಬಿಜೆಪಿ ಮತದಾರರ ದತ್ತಾಂಶವನ್ನು ಕದಿಯುತ್ತಿರುವ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಚಿಲುಮೆ ಸಂಸ್ಥೆ ಮೂಲಕ ಈ ಕೆಲಸ ಮಾಡಿದೆ ಎಂದು ಆರೋಪಿಸಿತ್ತು. ಇದೀಗ ಇಂದು ಕೂಡ ಆ ಬಗ್ಗೆ ಆರೋಪಿಸಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿದೆ.
ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಒಂದು ಸಂಸ್ಥೆ ದುಡ್ಡಿಲ್ಲದೆ ಕೆಲಸ ಮಾಡುತ್ತಿದೆ ಎಂದರೆ ಏನು ಅರ್ಥ. ಅವರಿಗೆ ಕೊಟ್ಟಿಬಿಟ್ಟಿದೆ. ಮುಖ್ಯಮಂತ್ರಿಗಳ ಅನುಮತಿ, ಕಮಿಷನರ್ ಅನುನತಿ ಇಲ್ಲದೆ ಮಾಡಬಹುದಾ. ಎಷ್ಟು ವ್ಯವಹಾರ ಆಗಿದೆ ಲೆಕ್ಕಹಾಕಿ. ಎಂಟು ಸಾವಿರ ಜನರಿಗೆ ಕೆಲಸ ಕೊಡುತ್ತಾರೆ ಎಂದರೆ ಸುಮ್ಮನೇನಾ. ದಿನಕ್ಕೆ ಒಂದೂವರೆ ಸಾವಿರ ದಿನಕ್ಕೆ ಕೊಟ್ಟರೆ ಎಷ್ಟಾಗುತ್ತೆ. ಮೊದಲು ತನಿಖೆ ನಡೆಸಲಿ. ನಾವು ಡಿಮ್ಯಾಂಡ್ ಮಾಡಿದ್ದೇವೆ ಎಂದಿದ್ದಾರೆ.
ಇದೆ ವುಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸೋಷಿಯಲ್ ಸರ್ವೆಗೆ ಅವರನ್ನು ಉಪಯೋಗಿಸಿಕೊಂಡೆ ಜನರನ್ನು ಉಪಯೋಗಿಸಿಕೊಂಡೆ ಅಂತ ಸಿಎಂ ಬೊಮ್ಮಾಯಿ ಉಡಾಫೆಯಾಗಿ ಮಾತನಾಡುತ್ತಾರೆ. ರಾಜರಾಜೇಶ್ವರಿ ನಗರ ವಾರ್ಡ್, ಮಲ್ಲೇಶ್ಚರಂ, ಮಹದೇವಪುರ ವಾರ್ಡ್ ನಲ್ಲಿ ಏನಾಗುತ್ತಿದೆ ಎಂದು ಗೊತ್ತಿದೆ. ಮನೆಗಳಿಗೆ ಹೋಗಿ ಮಾಪಿಂಗ್ ಮಾಡಿದೆ. ಚುನಾವಣಾ ಆಯೋಗ ಕೂಡ ಇದರಲ್ಲಿ ಶಾಮೀಲಾಗಿದೆ ಎನಿಸುತ್ತದೆ. ಈ ರೀತಿ ಮಾಡಿದ್ದೀವಿ ಅಂತ ಗೊತ್ತಾದ ಮೇಲೆ ಅವರ್ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದಿದ್ದಾರೆ.
ಇದೆಲ್ಲ ಚರ್ಚೆಯಾಗಬೇಕು. ಎಲ್ಲಿ, ಏನು, ಎತ್ತ, ಎಷ್ಟು ಫೋನ್ ನಂಬರ್, ಎಷ್ಟು ಬಾರಿ ಕರೆಯಾಗಿದೆ ಎಂಬುದೆಲ್ಲಾ ಬಯಲಾಗಬೇಕು. ಮಾನನಷ್ಟ ಕೇಸ್ ಹಾಕಲಿ. ಚಿಲುಮೆ ಸಂಸ್ಥೆ ಇಟ್ಟುಕೊಂಡು ನಾವೇನಾದರೂ ಮಾಡಿದರೆ ನಮ್ಮನ್ನು ಒಳಗೆ ಹಾಕಲಿ. ನಾಳೆ ಮಧ್ಯಾಹ್ನದ ಒಳಗೆ ಸಮಯ ನೀಡುತ್ತೇವೆ. ಒಂದು ನಿರ್ಧಾರಕ್ಕೆ ಬರಬೇಕು. ಅಕ್ರಮ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಚ್ಚರಿಕೆ ನೀಡಿದ್ದಾರೆ.