ಮೈಸೂರು: 2023ರ ಚುನಾವಣೆಗೆ ಈಗಾಗಲೇ ಸಿದ್ದತೆಗಳು ಶುರುವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಜನರನ್ನು ಸೆಳೆಯುವ ಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಜನರ ಬಳಿ ಹೋಗುತ್ತಿದ್ದಾರೆ. ಅದರ ಜೊತೆಗೆ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಇದೀಗ ಜೆಡಿಎಸ್ ನಲ್ಲಿ ಯಾರಿಗೆ ಯಾವ ಕ್ಷೇತ್ರ ನೀಡಬೇಕು ಎಂಬುದು ಈಗಾಗಲೇ ಸಿದ್ಧವಾಗಿದೆ. ಆದ್ರೆ ಪಟ್ಟಿ ಬಿಡುಗಡೆಗೆ ರೇವಣ್ಣ ಒಪ್ಪುತ್ತಿಲ್ಲವಂತೆ.
ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ನಮ್ಮ ಪಕ್ಷದಲ್ಲಿ ರೇವಣ್ಣ ಅವರು ಜ್ಯೋತಿಷಿಗಳಾಗಿದ್ದಾರೆ. ಈಗ ಪಟ್ಟಿ ಬಿಡುಗಡೆಗೆ ಸೂಕ್ತ ಸಮಯವಲ್ಲ ಎಂದು ಹೇಳಿದ್ದಾರೆ. ಈಗಾಗಲೇ 100 ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದೇವೆ. ಸೂಕ್ತ ಸಮಯ ನೋಡಿಕೊಂಡು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.
ಮಾಟ ಮಂತ್ರ ಮಾಡುವವರಿದ್ದಾರೆ. ಅಂತ ದುಷ್ಟ ಶಕ್ತಿಗಳನ್ನು ನಿಯಂತ್ರಿಸುವುದಕ್ಕೆ ನಿಂಬೆ ಹಣ್ಣು ಬೇಕು. ಅದಕ್ಕೆ ರೇವಣ್ಣ ನಿಂಬೆ ಹಣ್ಣು ಇಟ್ಟುಕೊಳ್ಳುತ್ತಾರೆ. ನಾನು ಕೂಡ ನಿಂಬೆ ಹಣ್ಣು ಇಟ್ಟುಕೊಳ್ಳುತ್ತೇನೆ. ರೇವಣ್ಣ ಅವರು ದೇವಸ್ಥಾನ, ದೇವರು, ಜ್ಯೋತಿಷ್ಯವನ್ನು ತುಂಬಾ ನಂಬುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜ್ಯದಲ್ಲಿ ದೇವಾಲಯಕ್ಕೆ ನಮ್ಮಷ್ಟು ಭೇಟಿ ಕೊಟ್ಟವರು ಯಾರು ಇಲ್ಲ. ಹೀಗಾಗಿ ಸರಿಯಾದ ಸಮಯ ನೋಡಿಕೊಂಡು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.