ಚಿತ್ರದುರ್ಗ, (ನ.14) : ನಗರದ ಐಯುಡಿಪಿ ಬಡಾವಣೆಯ ಲಿಲ್ ಬ್ರೂಕ್ಸ್ ಶಾಲಾ ಆವರಣದಲ್ಲಿ ಸೋಮವಾರ ಬಾದರದಿನ್ನಿ ಆಟ್ರ್ಸ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ಆಯೋಜಿಸಿರುವ ಒಂದು ವಾರಗಳ ಉಚಿತ ರಂಗತರಬೇತಿ ಶಿಬಿರ ರಂಗಕರ್ಮಿ ಮಹಾಂತೇಶ್ ಆದಿಮ್ ಅವರ ನೇತೃತ್ವದಲ್ಲಿ ಪ್ರಾರಂಭವಾಯಿತು.
ರಂಗಕರ್ಮಿ ಮಹಾಂತೇಶ್ ಆದಿಮ್ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದ ರಂಗಭೂಮಿಯ ಪರಿಚಯ ಮಾಡಿಸಬೇಕು. ಇದರಿಂದ ಮಕ್ಕಳಲ್ಲಿ ಶಿಸ್ತು, ಸಾಹಿತ್ಯದ ಪರಿಚಯ, ನಮ್ಮ ಭಾಷೆ, ನಾಡು ನುಡಿಯ ಬಗ್ಗೆ ಅರಿವು ಮೂಡಿಸಿದಂತೆ ಆಗುತ್ತದೆ. ಟಿವಿ ಹಾಗೂ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಆದಷ್ಟು ಮಕ್ಕಳಿಗೆ ಸಾಹಿತ್ಯ ಓದುವಂತೆ ಪ್ರೇರಿಪಿಸಬೇಕಾಗಿದೆ. ಜಗತ್ತಿನಲ್ಲಿ ಎಷ್ಟೇ ಹೊಸ ಹೊಸ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವ ಇದ್ದರು ರಂಗಭೂಮಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ. ಇಂದು ಹಿರಿಯ ರಂಗಕರ್ಮಿಗಳ ಜೊತೆ ಯುವ ರಂಗಕರ್ಮಿಗಳು ಸಹ ರಂಗಭೂಮಿಯ ಚಟುವಟಿಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಅಧ್ಯಕ್ಷೆ ಅನಸೂಯಾ ಬಾದರದಿನ್ನಿ ಮತ್ತಿತರರು ಇದ್ದರು.
ಫೋಟೋ
ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಲಿಲ್ ಬ್ರೂಕ್ಸ್ ಶಾಲಾ ಆವರಣದಲ್ಲಿ ಸೋಮವಾರ ಬಾದರದಿನ್ನಿ ಆಟ್ರ್ಸ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ಆಯೋಜಿಸಿರುವ ಒಂದು ವಾರಗಳ ಉಚಿತ ರಂಗತರಬೇತಿ ಶಿಬಿರ ರಂಗಕರ್ಮಿ ಮಹಾಂತೇಶ್ ಆದಿಮ್ ಅವರ ನೇತೃತ್ವದಲ್ಲಿ ಪ್ರಾರಂಭವಾಯಿತು.