ಮೈಸೂರು: ಸಿದ್ದರಾಮಯ್ಯ ಇತ್ತಿಚೆಗಷ್ಟೇ 75 ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಅವರ ಬೆಂಬಲಿಗರು, ಕಾರ್ಯಕರ್ತರೆಲ್ಲ ಸೇರಿ ಬರ್ತ್ ಡೇಯನ್ನು ಆಚರಿಸಿದ್ದಾರೆ. ಆದ್ರೆ ಈಗ ಇದ್ದಕ್ಕಿದ್ದ ಹಾಗೇ ಸಿದ್ದರಾಮಯ್ಯ ಅವರ ಬಾಯಲ್ಲಿ ನಾನು ಇನ್ನು ಎಷ್ಟು ವರ್ಷ ಬದುಕುತ್ತಿನೋ ಗೊತ್ತಿಲ್ಲ ಎಂಬ ಮಾತು ಬಂದಿದೆ. ಈ ವಿಚಾರವನ್ನು ಕೇಳುವುದಕ್ಕೂ ಬೆಂಬಲಿಗರಿಗೆ ಬೇಸರ ಎನಿಸಿದೆ.
2023ಕ್ಕೆ ವಿಧಾನಸಭಾ ಚುನಾವಣೆ ಹತ್ತಿರದಲ್ಲಿಯೇ ಇದೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸುತ್ತಾರೆ ಎಂಬ ಕುತೂಹಲವಿದೆ. ನಿನ್ನೆಯೆಲ್ಲಾ ಕೋಲಾರದಲ್ಲಿ ಸಂಚರಿಸಿ, ಸಂಚಲನ ಮೂಡಿಸಿದ್ದಾರೆ. ಇದೀಗ ಮೈಸೂರಿನಲ್ಲಿ ಮಾತನಾಡುವಾಗ. ನನ್ನ ಆಯಸ್ಸು ಈಗಾಗಲೇ 10 ವರ್ಷ ಕಡಿಮೆಯಾಗಿದೆ. ಇನ್ನು ಎಷ್ಟು ವರ್ಷ ಬದುಕುತ್ತೀನೋ ಗೊತ್ತಿಲ್ಲ ಎಂದಿದ್ದಾರೆ.
ನನಗೂ ಜನಸೇವೆ ಮಾಡುವುದಕ್ಕೆ ಇನ್ನು ಸಾಕಷ್ಟು ವರ್ಷ ಬದುಕಬೇಕು ಎಂಬುದು ಆಸೆ. ಆದ್ರೆ ಈಗ ನನಗೆ 76 ವರ್ಷ. ಡಯಾಬಿಟಿಕ್ ನಿಂದಾಗಿ 10 ವರ್ಷ ಕಡಿಮೆಯಾಗಿದೆ. ಎಷ್ಟು ವರ್ಷ ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ. ಎಲ್ಲರೂ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ರೋಗಗಳು ಬಾರದಂತೆ ತಡೆಯಬೇಕು. ಚಿಕ್ಕವಯಸ್ಸಿನಲ್ಲಿಯೇ ಆರೋಗ್ಯದ ಕಾಳಜಿ ತೋರಿಸಿಬೇಕು ಎಂದಿದ್ದಾರೆ.