ಬೆಂಗಳೂರು: ರೈತರ ಬಹು ದಿನದ ಆಸೆಯಂತೆ ಇಂದು KMF ಹಾಲಿನ ದರವನ್ನು ಏರಿಕೆ ಮಾಡಿದೆ. ಪ್ರತಿ ಲೀಟರ್ ಮೇಲೆ 3 ರೂಪಾಯಿ ಏರಿಕೆಯಾಗಿದೆ. ಇಂದು ಮಧ್ಯರಾತ್ರಿಯಿಂದಾನೇ ಈ ಆದೇಶ ಜಾರಿಯಾಗಲಿದೆ. ಒಂದು ಲೀಟರ್ ಹಾಲಿಗೆ ನಾಳೆಯಿಂದ 40 ರೂಪಾಯಿ ನೀಡಬೇಕಾಗುತ್ತದೆ. ಹಾಗೇ ಮೊಸರಿನ ದರವೂ ಹೆಚ್ಚಳವಾಗಿದ್ದು ಒಂದು ಲೀಟರ್ ಗೆ 48 ರೂಪಾಯಿ ಏರಿಕೆಯಾಗಿದೆ.
ದರ ಹೆಚ್ಚಳ ಮಾಡುವುದಕ್ಕೆ ಕಾರಣಗಳು, ಒಂದು ವಾತಾವರಣ ವೈಪರೀತ್ಯದಿಂದ ಮೇವು ಸಿಗುತ್ತಿಲ್ಲ. ಚರ್ಮಗಂಟು ರೋಗವೂ ಜಾನುವಾರುಗಳನ್ನು ಬೆಂಬಿಡದೆ ಕಾಡುತ್ತಿದೆ. ಸಾಗಾಣಿಕೆ, ವಿದ್ಯುತ್, ಪ್ಯಾಕಿಂಗ್ ಸಲಕರಣೆ ಹೀಗೆ ದರ ಏರಿಕೆಯಾಗಿರುವ ಕಾರಣ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ.
ಈ ಸಲ ದರ ಏರಿಕೆ ಮಾಡಿರುವ ಹಣ ನೇರವಾಗಿ ರೈತರ ಅಕೌಂಟ್ ಗೆ ಹೋಗಲಿದೆ ಎನ್ನುವ ವಿಚಾರವನ್ನು ಕೆಎಂಎಫ್ ದೃಢಪಡಿಸಿದೆ. ಹೀಗಾಗಿ ನೇರವಾಗಿ ರೈತರಿಗೆ ಈ ಹಣ ತಲುಪಿದರೆ ಬಹಳಷ್ಟು ಸಹಾಯವಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ ಕೂಡ ಆಗಿದೆ.