ಬೆಂಗಳೂರು: ಒಟಿಟಿ ಸೀಸನ್ ನಿಂದಾನು ರೂಪೇಶ್ ಶೆಟ್ಟಿಗೆ ಮಂಗಳೂರಿನ ಜನತೆ ಸಾಕಷ್ಟು ಸಪೋರ್ಟ್ ಮಾಡುತ್ತಿದ್ದಾರೆ. ರೂಪೇಶ್ ಶೆಟ್ಟಿ ಗೆಲ್ಲಲೇಬೇಕು ಎಂದಿದ್ದಾರೆ. ಆದ್ರೆ ಇದೇ ಮಂಗಳೂರಿನ ಮಂದಿ ಇದೀಗ ರೂಪೇಶ್ ಶೆಟ್ಟಿಯನ್ನು ನಿಂದಿಸುತ್ತಿದ್ದಾರೆ..? ಅವಾಚ್ಯ ಶಬ್ದದಿಂದ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ರೂಪೇಶ್ ಶೆಟ್ಟಿ ಇತ್ತೀಚೆಗೆ ನೀಡಿದ ಹೇಳಿಕೆ.
ಕನ್ನಡ ರಾಜ್ಯೋತ್ಸವದ ದಿನ ಎಲ್ಲರಿಗೂ ಒಂದು ಟಾಸ್ಕ್ ನೀಡಲಾಗಿತ್ತು. ಊರಿನ ಹೆಸರನ್ನು ಫೇಮಸ್ ವಿಷಯದ ಮೂಲಕ ಹೇಳಬೇಕಾಗಿತ್ತು. ಹೀಗೆ ಹೇಳುತ್ತಿದ್ದಾಗ ನಾನು ಗಡಿನಾಡಿನ ಹುಡುಗ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಇದು ತುಳುನಾಡಿನ ಜನರನ್ನು ರೊಚ್ಚುಗೇಳುವಂತೆ ಮಾಡಿದೆ.
ಇಷ್ಟು ದಿನ ತುಳುನಾಡಿನ ಕುವರ ಅಂತ ಹೇಳಿಕೊಂಡು ಈಗ ಗಡಿನಾಡಿನ ಹುಡುಗ ಅಂತ ಹೇಳಿಕೊಳ್ಳುತ್ತಿದ್ದಾರೆ ಎಂದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನಿಟ್ಟುಕೊಂಡು ರೂಪೇಶ್ ಶೆಟ್ಟಿಯನ್ನು ನಿಂದಿಸುತ್ತಿದ್ದಾರೆ. ಇದರಿಂದ ರೂಪೇಶ್ ಶೆಟ್ಟಿ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮಂಗಳೂರು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.