ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ಮಾಲ್ ನಲ್ಲಿ ಒಂದಾಗಿರೋ ಮಂತ್ರಿಮಾಲ್ ಆಗಾಗ ಸುದ್ದಿಯಾಗ್ತಾನೆ ಇರುತ್ತೆ. ಇದೀಗ ತೆರಿಗೆ ವಿಚಾರಕ್ಕೆ ಬಾಗಿಲು ಮುಚ್ಚಿದೆ.
ಸುಮಾರು 39 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ತೆರಿಗೆ ಹಣ ಕ್ಲಿಯರ್ ಮಾಡೋವರೆಗೆ ಮಾಲ್ ಓಪನ್ ಮಾಡೋದಕ್ಕೆ ಬಿಡಲ್ಲ ಎಂದು ಬಿಬಿಎಂಪಿ ಖಡಕ್ ವಾರ್ನಿಂಗ್ ನೀಡಿದೆ.
ಸುಮಾರು 39 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಕಳೆದ 3 ವರ್ಷದಿಂದಲೂ ತೆರಿಗೆ ಹಣ ಕಟ್ಟಿಲ್ಲ. ಇಂದು ಅಧಿಕಾರಿಗಳು ಸ್ಥಳಕ್ಕೆ ಹೋದ್ರು ಕೂಡ ತೆರಿಗೆ ಹಣ ಕಟ್ಟಿಲ್ಲ. ಹೀಗಾಗಿ ಬೀಗ ಹಾಕಲಾಗಿದೆ.
ತೆರಿಗೆ ಬಾಕಿ ಪಾವತಿಸುವಂತೆ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೋಟಿಸ್ ನೀಡಿದ್ದರು. 2017ರಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ತೆರಿಗೆ ಬಾಕಿ ಹಿನ್ನೆಲೆ ಮಂತ್ರಿ ಮಾಲ್ ಗೆ ಬೀಗ ಹಾಕಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಮಂತ್ರಿ ಮಾಲ್ ಗೆ ಬೀಗ ಹಾಕಲಾಗಿತ್ತು. ಬಳಿಕ 5 ಕೋಟಿ ರೂ. ಪಾವತಿ, ಉಳಿದ ಹಣವನ್ನು ಅಕ್ಟೋಬರ್ ಅಂತ್ಯದ ವೇಳೆ ಕಟ್ಟುವುದಾಗಿ ಭರವಸೆ ನೀಡಿದ್ದರಿಂದ ಬೀಗ ತೆರವುಗೊಳಿಸಲಾಗಿದೆ.