ಬೆಂಗಳೂರು: ಇಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಹಲವು ಕಾರ್ಯಕ್ರಮಗಳಿಗೆ ಚಾಲನೆ ಕೂಡ ನೀಡಿದ್ದರು. ಈ ವೇಳೆ ಪ್ರಧಾನಿ ಮೋದಿ ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನು ಹಾಕಿರುವ ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
ಮೊದಲ ಫೋಟೋ ಮೋದಿ ಜೊತೆ ಬಿಜೆಪಿ ನಾಯಕರು ನಿಂತಿದ್ದು, ಅದರಲ್ಲಿ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಇದ್ದಾರೆ. ಅವರ ಹೆಗಲ ಮೇಲೆಸಚಿವ ಆರ್ ಅಶೋಕ್ ಕೈ ಹಾಕಿದ್ದಾರೆ. ಈ ಫೋಟೋ ಹಾಕಿ ಕಾಂಗ್ರೆಸ್, ಸ್ವಾಮಿಜಿಗಳಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು. @RAshokaBJP ಅವರಿಗೆ ಸದರ ಎನಿಸಿದ್ದಾರೆಯೇ? ಇದೇ ರೀತಿ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ?. ಧರ್ಮ, ಸಂಸ್ಕೃತಿಯ ಬಗ್ಗೆ ಮಾತಾಡುವ @BJP4Karnataka ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂದಿದೆ.
ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರ ಫೋಟೋ ಹಾಕಿ, ರಾಜ್ಯದ ಮುಖ್ಯಮಂತ್ರಿ ಫೋಟೋ ತೆಗೆಸಿಕೊಳ್ಳಲೂ ಹರಸಾಹಸಪಡಬೇಕೇ?. ಪ್ರಧಾನಿ ಪಕ್ಕ ಸ್ವತಂತ್ರವಾಗಿ ನಿಲ್ಲಲೂ @BSBommai ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರೆ ಸಿಎಂ ಹುದ್ದೆಗೆ ಆಗುತ್ತಿರುವ ಅವಮಾನವಿದು. ಜಗ್ಗೇಶ್ ಅವರ ಹಿಂದೆ ನಿಂತು ಅವರನ್ನು ತಳ್ಳಿಕೊಂಡು ಮುಖ ತೋರಿಸುವ #PuppetCM ಅವರ ಸ್ಥಿತಿ ಶೋಚನೀಯವಾಗಿದೆ ಎಂದು ಟ್ವೀಟ್ ಮಾಡಿದೆ.