ಚಾಮರಾಜನಗರ: 2023ರ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ನಮ್ಮದೇ ಆಗಬೇಕೆಂದು ಮೂರು ಪಕ್ಷಗಳು ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿವೆ. ಇದರ ನಡುವೆ ಪಕ್ಷದಲ್ಲಿರುವ ಹಾಲಿ ಮತ್ತು ಮಾಜಿ ಶಾಸಕರ ನಡುವೆಯೇ ಮುಸುಕಿನ ಗುದ್ದಾಟ ಶುರುವಾಗಿದೆ. ಅದು ಚಾಮರಾಜನಗರ ಜಿಲ್ಲೆಯಲ್ಲಿ.
ಕೊಳ್ಳೆಗಾಲ ನಗರಸಭೆ ಉಪಚುನಾವಣೆಯ ಫಲಿತಾಂಶ ಬಂದಿದ್ದು, ಮಾಜಿ ಮತ್ತು ಹಾಲಿ ಶಾಸಕರ ಗುದ್ದಾಟಕ್ಕೆ ಕಾರಣವಾಗಿದೆ. ಚಾಮರಾಜನಗರ ಪ್ರತಿನಿಧಿಸುತ್ತಿದ್ದ ಎನ್ ಮಹೇಶ್ BSPಯಿಂದ ಉಚ್ಛಾಟನೆಗೊಂಡ ಮೇಲೆ ಬಿಜೆಪಿ ಸೇರಿದ್ದರು. ಈಗ ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಮೂಲಕ ಸ್ಪರ್ಧಿಸಿ, ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದು ನಂಜುಂಡಸ್ವಾಮಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಆರು ಬಾರಿ ಚುನಾವಣೆ ಎದುರಿಸಿ, ಎರಡು ಬಾರಿ ಶಾಸಕರಾಗಿದ್ದರು. ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಸೋಮಣ್ಣ ಸೇರಿದಂತೆ ಹಲವರು ಎನ್ ಮಹೇಶ್ ಕಡೆಗೆ ಬೆಂಬಲ ನೀಡಿದ್ದರು. ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಲೇಬೇಕೆಂದು ಪಣತೊಟ್ಟಿದ್ದರು. ಅದೇ ರೀತಿ ಗೆಲುವು ಸಿಕ್ಕಿದ್ದು, ಮಾಜಿ ಮತ್ತು ಹಾಲಿ ಶಾಸಕರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.