ಇಂದು ಟೀಂ ಇಂಡಿಯಾ ಗೆದ್ದೆ ಗೆಲ್ಲುತ್ತೆ ಎಂಬ ಭರವಸೆ ಎಲ್ಲರಲ್ಲೂ ಇತ್ತು. ಆದ್ರೆ ಕೊನೆ ಮೂಮೆಂಟ್ ನಲ್ಲಿ ಇಂಡಿಯಾ ಗೆಲ್ಲಲ್ಲ ಅನ್ನೋದು ಸಾಬೀತಾಗಿತ್ತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, ಆರಂಭದಲ್ಲಿಯೇ ರಾಹುಲ್ ವಿಕೆಟ್ ಕಳೆದುಕೊಂಡಿತ್ತು. ಕೊನೆಗೂ ಇಂಗ್ಲೆಂಡ್ ಭರ್ಜರಿ ಜಯ ಗಳಿಸಿದೆ. ಇಂಗ್ಲೆಂಡ್ ವಿರುದ್ಧ ಸೋತಿದ್ದಕ್ಕೆ ನಾಯಕ ರೋಹಿತ್ ಶರ್ಮಾ ಕಣ್ಣೀರು ಹಾಕಿದ್ದಾರೆ.
ಡಕೌಟ್ ನಲ್ಲಿ ಕುಳಿತು ರೋಹಿತ್ ಶರ್ಮಾ ಕಣ್ಣೀರು ಹಾಕಿದ್ದು, ಎಲ್ಲರೂ ಶರ್ಮಾಗೆ ಸಮಾಧಾನ ಮಾಡಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಕೂಡ ಸಮಾಧಾನ ಮಾಡಿದ್ದಾರೆ. ಭಾರತದ ಮೊದಲ 10 ಓವರ್‌ಗಳಲ್ಲಿ ಜಾಸ್ತಿ ರನ್ ಬಂದಿರಲಿಲ್ಲ. ಮೊದಲ ಪವರ್ ಪ್ಲೇ 6 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿತ್ತು. 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತ್ತು. 15 ಓವರ್‌ಗಳಲ್ಲಿ 100 ರನ್ ಬಂದಿದ್ದರೆ ಕೊನೆಯ 30 ಎಸೆತಗಳಲ್ಲಿ 68 ರನ್ ಬಂದಿತ್ತು.
https://twitter.com/SportyVishal/status/1590664042519367680?t=0NsdW9WKa5JgDlBBxH08bQ&s=08
ಇಂಗ್ಲೆಂಡ್ ಮೊದಲ ಓವರಿನಿಂದಲೇ ದಂಡಿಸಲು ಆರಂಭಿಸಿತ್ತು ಮತ್ತು ಓವರ್ ಒಂದಕ್ಕೆ ಸರಾಸರಿ 10 ರನ್‌ಗಳು ಬರುತ್ತಿದ್ದವು. ಮೊದಲ ಪವರ್ ಪ್ಲೇನಲ್ಲಿ 63 ರನ್ ಬಂದರೆ 10.1 ಓವರ್‌ನಲ್ಲಿ 100 ರನ್ ಬಂದಿತ್ತು. ಕೇವಲ 83 ಎಸೆತಗಳಲ್ಲಿ 150 ರನ್ ದಾಖಲಾಗಿತ್ತು. ಅಂತಿಮವಾಗಿ 16 ಓವರ್‌ಗಳಲ್ಲಿ 170 ರನ್ ಗಳಿಸಿತ್ತು.