ತಂದೆ ತಾಯಿಗಳನ್ನು ಅನಾಥಾಶ್ರಮ, ವೃದ್ದಾಶ್ರಮಗಳಿಗೆ ಸೇರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ : ದಿನೇಶ್ ಪೂಜಾರಿ ವಿಷಾದ

suddionenews
1 Min Read

 

ವರದಿ ಮತ್ತು ಫೋಟೋ  ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ನ.04): ಮುಪ್ಪಿನ ಕಾಲದಲ್ಲಿ ಸರಿಯಾಗಿ ನೋಡಿಕೊಳ್ಳದೆ ತಂದೆ ತಾಯಿಗಳನ್ನು ಅನಾಥಾಶ್ರಮ, ವೃದ್ದಾಶ್ರಮಗಳಿಗೆ ಸೇರಿಸುವವರ ಸಂಖ್ಯೆ ಜಾಸ್ತಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ವಿಷಾಧಿಸಿದರು.

ಮೆದೇಹಳ್ಳಿ ವಲಯ ಗಾರೆಹಟ್ಟಿ ಕಾರ್ಯಕ್ಷೇತ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಲಮಂಗಲ ಕಾರ್ಯಕ್ರಮದಡಿ ನಾಲ್ವರಿಗೆ ಉಚಿತ ವೀಲ್‍ಚೇರ್ ಮತ್ತು ಸ್ಟಿಕ್‍ಗಳನ್ನು ವಿತರಿಸಿ ಮಾತನಾಡಿದರು.

ವಯಸ್ಸಾದಾಗ ಎಲ್ಲರಿಗೂ ಅಂಗಾಂಗಳು ಸವಿಯುವುದು ಸಹಜ. ಅಂತಹ ಸಂದರ್ಭಗಳಲ್ಲಿ ವೃದ್ದರನ್ನು ಜೋಪಾನವಾಗಿ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ  ವೃದ್ದಾಶ್ರಮ, ಅನಾಥಾಶ್ರಮಗಳಿಗೆ ಸೇರಿಸಬಾರದು. ಮಕ್ಕಳು ಬೆಳೆದು ದೊಡ್ಡವರಾಗಿ ಶಿಕ್ಷಣ ಇಲ್ಲವೇ ಕೆಲಸಕ್ಕಾಗಿ ಬೇರೆ ಊರುಗಳಿಗೆ ಹೋಗುವುದರಿಂದ ಮನೆಯಲ್ಲಿ ವಯಸ್ಸಾದವರು ಒಂಟಿಯಾಗುತ್ತಾರೆ. ಅಂತಹ ಸಂದರ್ಭದಲ್ಲಿ ವಯೋವೃದ್ದರನ್ನು ವೃದ್ದಾಶ್ರಮಕ್ಕೆ ಸೇರಿಸುವ ಪದ್ದತಿ ಹುಟ್ಟಿಕೊಂಡಿದೆ. ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಬೇಕೆಂದು ಹೇಳಿದರು.

ನಿರ್ಗತಿಕರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ತಿಂಗಳಿಗೆ 750 ರಿಂದ ಒಂದು ಸಾವಿರ ರೂ.ಮಾಶಾಸನ ಕೊಡುತ್ತೇವೆ. ವೀರೇಂದ್ರ ಹಗಡೆರವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ಹೆಗಡೆರವರು ಅನುಷ್ಠಾನಕ್ಕೆ ತಂದಿರುವ ಕಾರ್ಯಕ್ರಮದಡಿ ನಿರ್ಗತಿಕರಿಗೆ ಪೌಷ್ಠಿಕಾಂಶವುಳ್ಳ ವಾತ್ಸಲ್ಯ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಇದರ ಜೊತೆಗೆ ಉಚಿತವಾಗಿ ಪಾತ್ರೆ ಮತ್ತು ಬಟ್ಟೆಗಳನ್ನು ನೀಡಲಾಗುವುದು. ಶೌಚಾಲಯಗಳಿಲ್ಲದವರಿಗೆ ಶೌಚವನ್ನು ಕಟ್ಟಿಸಿಕೊಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವನಜಾಕ್ಷಿ, ಶಿವಣ್ಣ, ತಾಲ್ಲೂಕು ಯೋಜನಾಧಿಕಾರಿ ಅಶೋಕ್ ಬಿ. ವಲಯ ಮೇಲ್ವಿಚಾರಕ ಗುರುಬಸವರಾಜ್, ಜ್ಞಾನಿವಿಕಾಸ ಸಮನ್ವಯಾಧಿಕಾರಿ ಸುಧಾ, ಒಕ್ಕೂಟದ ಅಧ್ಯಕ್ಷರುಗಳಾದ ಶಾಂತ, ಜ್ಯೋತಿ, ಸೇವಾಪ್ರತಿನಿಧಿ ಜಯಮಾಲ, ಸಂಘದ ಎಲ್ಲಾ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *