ಚಿತ್ರದುರ್ಗ,(ನ.04): ನೂತನ್ ಎಜುಕೇಷನ್ ಸೊಸೈಟಿಯ ಅಂಗಸ್ಥೆಯಾದ ನೂತನ್ ಪಿಯು ಕಾಲೇಜಿನಲ್ಲಿ ನಿರ್ಮಾಣ ಮಾಡಲಾಗಿರುವ ವಿಜ್ಞಾನ ಪ್ರಯೋಗಾಲಯವನ್ನು ವಿದಾನಪರಿಷತ್ ಮಾಜಿ ಸದಸ್ಯ ಜಿ.ರಘು ಆಚಾರ್ ಅವರು ಶುಕ್ರವಾರ ಉದ್ಘಾಟನೆ ನೆರವೇರಿಸಿದರು.
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿರುವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರಯೋಗಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ರಘು ಆಚಾರ್, ಶಿಕ್ಷಣದಲ್ಲಿ ರಾಜಕೀಯ ಬೆರಸಬಾರದು, ವಿದ್ಯಾರ್ಥಿಗಳು ಕೂಡ ದುರಾಲೋಚನೆಗಳನ್ನು ಮಾಡಬಾರದು, ದೂರ ದೃಷ್ಟಿಯಿಂದ ಏನಾದರೂ ಮಹತ್ವದ್ದನ್ನ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ವಿದ್ಯಾಭ್ಯಾಸ ಮಾಡಬೇಕು, ಎಂದು ಸಲಹೆ ನೀಡಿದರು.
ಖಾಸಗಿ ಶಿಕ್ಷಣ ಸಂಸ್ಥೆಯೊಂದು ಬಡ ಕುಟುಂಬದ ವಿದ್ಯಾರ್ಥಿಗಳು ಹಾಗು ಅನಾಥಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಸೇವಾಮನೋಭಾವದ ಬಗ್ಗೆ ತಿಳಿದು ತುಂಬಾ ಸಂತಸವಾಯಿತು, ಹೀಗಾಗ್ಲಿ ವಿಜ್ಞಾನ ಪ್ರೋಗಾಲಯಕ್ಕೆ ಬೇಕಾದ ಉಪಕರಣಗಳನ್ನು ಒದಗಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದ್ದು, ಮುಂದೆಯೂ ಸಹ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಹಾಯ ಸಹಕಾರ ಬೇಕಿದ್ದರೂ ನೀಡುತ್ತೇನೆ ಎಂದು ಭರವಸೆ ನೀಡಿದರು.