Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮನವೆಂಬ ಮರ್ಕಟದ ಲೆಕ್ಕಪರಿಶೋಧಕರು ನಾವಾದರೆ ತಪ್ಪುಗಳಾಗುವುದಿಲ್ಲ : ಮಹಾದೇವಿ ಎಂ.

Facebook
Twitter
Telegram
WhatsApp

 

ಚಿತ್ರದುರ್ಗ, (ನ.04) : ಮನವೆಂಬುದು ಮರ್ಕಟವಿದ್ದಹಾಗೆ. ನಾಗಲೋಟದಲ್ಲಿ ಓಡುವ ಮನಸ್ಸಿನ ಲೆಕ್ಕಪರಿಶೋಧಕರು ನಾವಾದರೆ ಜೀವನದಲ್ಲಿ ತಪ್ಪುಗಳಾಗುವುದಿಲ್ಲ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕಿ ಮಹಾದೇವಿ ಎಂ. ಮರಕಟ್ಟಿ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಸಾಪ, ರಂಗಸೌರಭ ಕಲಾ ಸಂಘ, ಪ್ರಜಾಸೇವಾ ಸಾಂಸ್ಕøತಿಕ ಮತ್ತು ಕ್ರೀಡಾಸಂಘ ಇವರ ಸಹಯೋಗದಲ್ಲಿ ಗುರುವಾರ 67ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೀವನವೆಂಬ ಲೆಕ್ಕಾಚಾರದಲ್ಲಿ ತಪ್ಪುಗಳು ಆಗುತ್ತವೆ. ಆ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದೆ. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಸಂಸ್ಥೆಗಳು ಲೆಕ್ಕಪರಿಶೋಧನೆಯನ್ನು ಮಾಡಿಸಿ ಆದ ಪ್ರಮಾದಗಳನ್ನು ಮತ್ತೊಮ್ಮೆ ಆಗದಂತೆ ನೋಡಿಕೊಳ್ಳುತ್ತವೆ. ಜೀವನವೂ ಹಾಗೆಯೇ. ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು ಆಗ ಮಾತ್ರ ಜೀವನ ಸುಗಮವಾಗಲು ಸಾಧ್ಯ. ಚಿತ್ರದುರ್ಗ ಜಿಲ್ಲಾ ಕಸಾಪ ಹಾಗು ವಿವಿಧ ಸಂಸ್ಥೆಗಳು ವಿಶಿಷ್ಟವಾಗಿ ಈ ಕಾರಾಗೃಹದಲ್ಲಿ ರಾಜ್ಯೋತ್ಸವ ನಿಮಿತ್ತ ಕನ್ನಡ ಗೀತೆಗಳ ಗಾಯನ ಹಮ್ಮಿಕೊಂಡಿರುವುದು ಖುಷಿಯ ಸಂಗತಿ. ಸಂಗೀತ ಮನಸ್ಸನ್ನು ತಿಳಿಗೊಳಿಸುವ ಸಾಧನ ಇಂತಹ ಕಾರ್ಯಕ್ರಮಗಳಿಂದ ಮನಸ್ಸು ಪರಿವರ್ತನೆಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಸಂಗೀತವೆಂಬುದು ಗಾಯಕ ಹಾಗು ಕೇಳುಗರ ಇಬ್ಬರ ಮನಸ್ಸನ್ನು ಮುದಗೊಳಿಸುತ್ತದೆ. ಒಳ್ಳೆಯ ಹಾಡು ಹಾಡಿದೆ ಎನ್ನುವ ತೃಪ್ತಿ ಗಾಯಕನಿಗೆ ಇದ್ದರೆ, ಎಲ್ಲಾ ಕಷ್ಟಗಳನ್ನು ಮರೆತು ಕ್ಷಣ ಕಾಲ ಸಂಗೀತ ಆಲಿಸಿದ ಸಂತಸ ಕೇಳುಗರಿಗಿರುತ್ತದೆ ಈ ಮಾತನ್ನು ಖ್ಯಾತ ಇಂಗ್ಲೀಷ್ ಕವಿ ಷೇಕ್ಸ್‍ಪೀಯರ್ ಒಂದೆಡೆ ಉಲ್ಲೇಖಿಸಿದ್ದಾನೆ. ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಾಗೆಯೇ ಸಂಗೀತಕ್ಕೂ ಆದರದ್ದೇ ಆದ ಮಹತ್ವವಿದೆ. ಸಾಹಿತ್ಯದೊಂದಿಗೆ ಸಂಗೀತ ಬೆರೆತರೆ ಅದೊಂದು ಅದ್ಭುತ ಲೋಕವನ್ನೇ ಸೃಷ್ಟಿಸುತ್ತದೆ. ಕನ್ನಡ ಗೀತೆಗಳು ಅಂತಹ ಅದ್ಭುತವಾದ ಲೋಕವನ್ನು ಸೃಷ್ಟಿಸಿದ ಉದಾಹರಣೆಗಳಿವೆ ಎಂದು ಖ್ಯಾತ ಕವಿಗಳು ಅವುಗಳನ್ನು ಹಾಡಿದ ಗಾಯಕರನ್ನು ತಿಳಿಸಿದರು.

ಜನಸಾಮಾನ್ಯರಿಗೆ ಸಾಹಿತ್ಯ ತಲುಪುವುದು ಅದಕ್ಕೆ ಸಂಗೀತ ಬೆರೆತಾಗಲೇ. ಅನಕ್ಷರಸ್ಥರಿಗೂ ಸಾಹಿತ್ಯದ ಮಹತ್ವವನ್ನು ತಿಳಿಸುವುದು ಸಂಗೀತವೇ. ಅದು ಸಂಗೀತದ ಯಾವುದೇ ಪ್ರಕಾರವಾಗಬಹದು ಎಂದು ತಿಳಿಸಿದರು.

ಜೀವನದಲ್ಲಿ ಆದಂತಹ ನೋವುಗಳನ್ನು ಮರೆಸುವ ಅದ್ಭುತವಾದ ಶಕ್ತಿ ಇರುವುದು ಉತ್ತಮ ಸಾಹಿತ್ಯ, ಸಂಗೀತಕ್ಕೆ ಮಾತ್ರ ಎಂದು ಹಲವಾರು ಮಹನೀಯರ ಕಥೆಗಳನ್ನು ಉದಾಹರಣೆ ಮೂಲಕ ವಿವರಿಸಿದರು.

ಗಾಯಕರಾದ ಎಂ.ಕೆ. ಹರೀಶ್, ಗಂಗಾಧರಪ್ಪ, ಹಿಮಂತ್‍ರಾಜ್, ಮೈಲಾರಿ, ಅಂಜಿನಪ್ಪ, ರಂಗ ನಿರ್ದೇಶಕ ಕೆಪಿಎಂ.ಗಣೇಶಯ್ಯ ಮತ್ತು ತಂಡ ಹಲವಾರು ಭಾವಗೀತೆಗಳು, ಕನ್ನಡ ಮಹತ್ವವನ್ನು ಸಾರುವ ಚಲನಚಿತ್ರ ಗೀತೆಗಳನ್ನು ಹಾಡಿದರು. ಕಾರಾಗೃಹದ ಬಂಧಿನಿವಾಸಿಗಳು ಸಿ.ಅಶ್ವತ್ ಗಾಯನದ ಒಳಿತು ಮಾಡು ಮನುಷ ಎಂಬ ಗೀತೆಯನ್ನು ಬಂಧಿನಿವಾಸಿಗಳೇ ಹಾಡಿದುದು ಎಲ್ಲರ ಗಮನ ಸೆಳೆಯಿತು.

ಅಲ್ಲದೇ ನಾಡಿನ ಚರಿತ್ರೆಯನ್ನು ಸಾರುವ ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ.. ಡಾ.ರಾಜ್ ಅಭಿನಯದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ರವಿಚಂದ್ರನ್ ಅಭಿನಯದ ಡಾ.ಎಸ್.ಪಿ.ಬಿ ಹಾಡಿದ ಕರುನಾಡ ತಾಯಿ ಸದಾ ಚಿನ್ಮಯಿ.. ಮುಂತಾದ ಮನಸ್ಸಿಗೆ ಮುದ ನೀಡುವ ಗೀತೆಗಳ ಗಾಯನ ಸೊಗಸಾಗಿ ಮೂಡಿಬಂತು. ಅಪ್ಪು ಅಭಿನಯದ ಬೊಂಬೆ ಹೇಳುತೈತೆ.. ಹಾಡು ಹಾಗು ಸತ್ಯಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹಾಡಿಗೆ ಬಂಧಿನಿವಾಸಿಗಳು ಮೈಮರೆತು ಆಲಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಕೋಶಾಧ್ಯಕ್ಷ ಚೌಳೂರು ಲೋಕೇಶ್, ಕಸಾಪ ನಿರ್ದೇಶಕ ಶ್ರೀನಿವಾಸ ಮಳಲಿ, ನಿವೃತ್ತ ಶಿಕ್ಷಕ ಎಂ.ಆರ್.ದಾಸೇಗೌಡ, ಕಾರಾಗೃಹದ ಶಿಕ್ಷಕ ಶ್ರೀರಾಮರೆಡ್ಡಿ ಹಾಗು ಕಾರಾಗೃಹದ ಸಿಬ್ಬಂದಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸತತ 5ನೇ ದಿನವೂ ಏರಿಕೆಯತ್ತ ಚಿನ್ನದ ದರ : ಇಂದು ಎಷ್ಟಿದೆ ನೋಡಿ..!

ಬೆಂಗಳೂರು: ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಸತತ ಐದನೇ ದಿನಕ್ಕೂ ಏರಿಕೆಯತ್ತಲೇ ಮುಖ ಮಾಡಿದೆ. ದೀಪಾವಳಿಯ ಬಳಿಕ ಕಂಚ ಇಳಿಕೆ ಕಂಡು ಎಲ್ಲರಿಗೂ ಖುಷಿ ಕೊಟ್ಟಿದ್ದ ಚಿನ್ನ ಶಾಕ್ ಆಗಿವಷ್ಟು

ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ : ಶಿವಲಿಂಗಾನಂದ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ನ. 23 : ರಕ್ತವನ್ನು ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತವನ್ನು

ಸೆಡೆಗಳು ಎಂದಿದ್ದ ರಜತ್ ಗೆ ಬೆವರಿಳಿಸಿದ ಬಾದ್ ಶಾ..!

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಬಂದಿದ್ದಾರೆ. ರಜತ್ ಆರಂಭದಿಂದಾನು ಒಳ್ಳೆ ರೌಡಿಸಂ ತೋರಿಸುವ ರೀತಿಯೇ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕು

error: Content is protected !!