ತುಮಕೂರು: ಇಂತಹ ಘಟನೆಗಳು ಒಂದೋ ಎರಡೋ ಅಲ್ಲ.. ಆಗಾಗ ನಡೆಯುತ್ತಲೆ ಇರುತ್ತವೆ. ಜೀವ ಕೊಡಬೇಕಾದವರ ಮನಸ್ಸು ಅದ್ಯಾಕೆ ಅಷ್ಟು ಕ್ರೂರವಾಗುತ್ತೋ ಏನೋ..? ಜ್ವರವೋ ಮತ್ತಂದೋ ಕಾಯಿಲೆಗೋ ಇಂತಹ ದುರಹಂಕಾರ ತೋರಿಸಲಿ. ಆದರೆ ಹೊಟ್ಟೆಯಲ್ಲಿ ಎರಡು ಮಕ್ಕಳನ್ನು ಇಟ್ಟುಕೊಂಡು ಹೆರಿಗೆಗೆ ಬಂದ ಹೆಣ್ಣನ್ನು ಮಸಣ ನೋಡುವಂತೆ ಮಾಡಿದ್ದು ಅದೆಷ್ಟು ಸೆಇ.
ಇಷ್ಟೆಲ್ಲ ಆಕ್ರೋಶದ ಮಾತು ಕೇಳಿ ಬರುವುದಕ್ಕೆ ಕಾರಣ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನಡೆದ ಕ್ರೂರ ಘಟನೆ. ತುಮಕೂರು ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ತಾಯಿ ಸೇರಿ ಇಬ್ಬರು ಮಕ್ಕಳು ಬಲಿಯಾಗಿವೆ. ಪ್ರಸವ ವೇಳೆ ಅನಾಥ ಬಾಣಂತಿ ಹಾಗೂ ಅವಳಿ ಶಿಶುಗಳ ಸಾವನ್ನಪ್ಪಿವೆ.
ಅವಳಿ ಮಕ್ಕಳನ್ನು ಜನ್ಮ ನೀಡಿ ಬಾಣಂತಿ ಕಸ್ತೂರಿ ಕೊನೆಯುಸಿರೆಳೆದಿದ್ದಾರೆ. ತುಮಕೂರು ನಗರದ ಭಾರತಿನಗರದ ಅಭಯ ಆಂಜನೇಯನ ಸ್ವಾಮಿ ದೇವಸ್ಥಾನದ ಬಳಿ ಘಟನೆ ನಡೆದಿದೆ. ಕಸ್ತೂರಿ ತುಮಕೂರು ನಗರದ ಭಾರತಿ ನಗರದಲ್ಲಿ ಒಂದು ಹೆಣ್ಣು ಮಗು ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 9 ತಿಂಗಳ ತುಂಬು ಗರ್ಭಿಣಿ ಆಗಿದ್ದ ಕಸ್ತೂರಿ, ನಿನ್ನೆ ಸಂಜೆ ಮನೆಯಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ಈ ವೇಳೆ ಆಕೆಯ ಕಷ್ಟ ನೋಡಲಾರದೇ ಸ್ಥಳೀಯರೇ ಹಣ ಕಲೆಕ್ಟ್ ಮಾಡಿ, ಆಟೋ ಮಾಡಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳಿಸಿದ್ರು. ಪಕ್ಕದ ಮನೆಯ ಅಜ್ಜಿಯ ಜೊತೆ ತುಮಕೂರು ಜಿಲ್ಲಾಸ್ಪತ್ರೆಗೆ ಹೋಗಿದ್ರು. ಈ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ಕೊಡದೇ ವಾಪಸ್ ಕಳುಹಿಸಿದ್ದಾರೆ. ವೈದ್ಯೆಯ ಬಳಿ ಅಂಗಲಾಚಿ ಕೇಳಿದ್ರು ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆ.
ನಾವು ಚಿಕಿತ್ಸೆ ಕೊಡಲ್ಲ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡ್ತಿನಿ ಎಂದಿದ್ದಾರೆ. ಕಸ್ತೂರಿ ಹಣವಿಲ್ಲದೇ ಹೊಟ್ಟೆ ನೋವಿನಲ್ಲೇ ಮನೆಗೆ ವಾಪಸ್ ಬಂದಿದ್ದಾರೆ. ಬೆಳಗ್ಗಿ ಜಾವ ಹೊಟ್ಟೆ ನೋವಿನಿಂದ ಕಿರುಚಾಡಿ ಒಂದು ಮಗುವಿಗೆ ಜನ್ಮ ನೀಡಿದ್ದ ತಾಯಿ, ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿದೆ. ಎರಡು ಮಕ್ಕಳು ಹಾಗೂ ತಾಯಿ ಸಾವನ್ನಪ್ಪಿವೆ.