ದಾವಣಗೆರೆ: ಕಳೆದ ಮೂರು ದಿನದಿಂದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮತ್ತು ಕುಟುಂಬಸ್ಥರು ದುಃಖದಲ್ಲಿದ್ದಾರೆ. ಮನೆಯ ಮಗ ಕಾಣುತ್ತಿಲ್ಲ ಎಂಬ ನೋವು, ಮಗನಿಗೆ ಏನಾಯ್ತೋ ಎಂಬ ಆತಂಕ ಕುಟುಂಬಸ್ಥರಲ್ಲಿ ಮನೆ ಮಾಡಿದೆ. ಮೂರು ದಿನಗಳಾದರೂ ಮಗನ ಸುಳಿವು ಸಿಗುತ್ತಿಲ್ಲ ಎಂದು ರೇಣುಕಾ ಚಾರ್ಯ ಕಂಗಾಲಾಗಿದ್ದಾರೆ. ಇದರ ಜೊತೆಗೆ ಇಂದು ಚಾನಲ್ ವೊಂದರಲ್ಲಿ ಕಾರಿನ ಅವಶೇಷಗಳನ್ನು ಕಂಡು ಗಾಬರಿಯಾಗಿದ್ದಾರೆ.

ಹೆಚ್ ಕಡದಕಟ್ಟೆ ಮಧ್ಯೆ ಬರುವ ಚಾನಲ್ ವೊಂದರಲ್ಲಿ ಕಾರಿನ ಬಿಡಿಭಾಗಗಳು ಸಿಕ್ಕಿವೆ. ಆದರೆ ಈ ಬಿಡಿ ಭಾಗಗಳು ಚಂದ್ರಶೇಖರ್ ಕಾರಿನದ್ದಾ ಅಲ್ಲವಾ ಎಂಬುದು ಇನ್ನು ಕನ್ಫರ್ಮ್ ಆಗಿಲ್ಲ. ಆದ್ರೆ ಈ ಬಿಡಿ ಭಾಗಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಭಾನುವಾರದ ತನಕ ಮಾತ್ರ ಚಂದ್ರಶೇಖರ್ ಫೋನ್ ಲೋಕೇಶನ್ ತೋರಿಸುತ್ತಿದೆ. ಯಾವ ಸುಳಿವು ಸಿಗುತ್ತಿಲ್ಲ. ಹೀಗೆ ಕಾರಿನ ಅವಶೇಷಗಳು ಸಿಕ್ಕಿದೆ ಎಂದ ಕೂಡಲೇ ರೇಣುಕಾ ಚಾರ್ಯ ಅವರು ಗಾಬರಿಯಾಗಿ ಓಡಿ ಬಂದಿದ್ದು, ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.


