ಚಿತ್ರದುರ್ಗ: ವಾಟ್ಸಾಪ್ ಮೂಲಕ ವಿಡಿಯೋ ಕಾಲ್ ಮಾಡಿ, ನಗ್ನ ದೃಶ್ಯಗಳನ್ನು ತೋರಿಸಿ, ಬ್ಲಾಕ್ ಮೇಲ್ ಮಾಡುವ ಪ್ರಕರಣಗಳು ಸಾಕಷ್ಟು ನಡೆದಿವೆ. ಆದರೆ ಇದೀಗ ಇಂಥಹ ಪ್ರಕರಣ ಶಾಸಕರ ಬುಡಕ್ಕೂ ಬಂದಿದೆ. ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ ಅಪರಿಚಿತ ಮಹಿಳೆಯೊಬ್ಬರು ವಾಟ್ಸಾಪ್ ಮೂಲಕ ವಿಡಿಯೋ ಕಾಲ್ ಮಾಡಿ, ನಗ್ನ ವಿಡಿಯೋ ತೋರಿಸಿದ್ದಾಳೆ.
ಈ ಸಂಬಂಧ ತಿಪ್ಪಾರೆಡ್ಡಿ ಅವರು ಪೊಲೀಸ್ ಕಂಪ್ಲೈಂಟ್ ಕೊಟ್ಟಿದ್ದಾರೆ. ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಾಟ್ಸಾಪ್ ನಲ್ಲಿ ವಿಡಿಯೋ ಕಾಲ್ ಬಂದಿತ್ತು. ಅದನ್ನು ನಾನು ಕ್ಷೇತ್ರದ ಜನರೋ, ಯಾರೋ ಮಾಡಿದ್ದಾರೆ ಎಂದು ರಿಸೀವ್ ಮಾಡಿದೆ. ಆದ್ರೆ ಆ ಮಾತು ನನಗೆ ಅರ್ಥವಾಗುತ್ತಾ ಇರಲಿಲ್ಲ. ಬಳಿಕ ಬೇರೆ ಏನೇನೋ ಬರುತ್ತಿತ್ತು. ತಕ್ಷಣ ನನ್ನ ಪತ್ನಿಗೆ ಹೇಳಿ ಆ ನಂಬರ್ ಬ್ಲಾಕ್ ಮಾಡಿಸಿದೆ.
ಈ ಸಂಬಂಧ ಎಸ್ಪಿಗೆ ದೂರು ನೀಡಿದ್ದೇನೆ. ತನಿಖೆ ಎಲ್ಲಿಯ ತನಕ ಬಂತು ಗೊತ್ತಿಲ್ಲ. ವಿಡಿಯೋ ಕಾಲ್ ಬಂದ ನಂಬರ್, ಓಡಿಸ್ಸಾ ಅಥವಾ ರಾಜಸ್ಥಾನದಿಂದ ಬಂದ ನಂಬರ್ ಎಂದು ಹೇಳಲಾಗುತ್ತಿದೆ ಎಂದು ಶಾಸಕ ತಿಪ್ಪಾರೆಡ್ಡಿ ಮಾಹಿತಿ ತಿಳಿಸಿದ್ದಾರೆ.