ಬಳ್ಳಾರಿ : ವೇದಾವತಿ ನದಿ ಬಳಿ ನಡೆಯುತ್ತಿರುವ ಕಾಮಗಾರಿಯೊಂದು ರೈತರ ಬೆಳೆಗೆ ಸಮಸ್ಯೆಯ ಉಂಟು ಮಾಡುತ್ತಿದೆ ಎಂದು ತಿಳಿದ ಬಳಿಕ ಸ್ವತಃ ಶ್ರೀರಾಮುಲು ಅವರೇ ಕಾಮಗಾರಿಬಳಿ ಹೋಗಿ ಬಿಸಿ ಮುಟ್ಟಿಸಿದ್ದಾರೆ. ಕಾಮಾಗಾರಿಯನ್ನು ಬೇಗ ಮುಗಿಸುವಂತೆ ತಾಕೀತು ಮಾಡಿದ್ದಾರೆ. ರಾತ್ರಿಯಿಡೀ ಅಲ್ಲಿಯೇ ವಾಸ್ತವ್ಯ ಹೂಡಿ, ರೈತರ ಪರ ನಿಂತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಶ್ರೀರಾಮುಲು, ನನ್ನ ಉಸ್ತುವಾರಿ ಜಿಲ್ಲೆಯಾದ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೈರದೇವನಹಳ್ಳಿಯ ಎಲ್. ಎಲ್. ಸಿ ಕಾಲುವೆಯ ಪಿಲ್ಲರ್ ದುರಸ್ತಿ ಕಾರ್ಯ ನಡೆಯುತ್ತಿದ್ದು, ರಾತ್ರಿಪೂರ್ತಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ ನಂತರ ಮುಂಜಾನೆ ಪವಿತ್ರ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ರೈತರ ಕಲ್ಯಾಣಕ್ಕಾಗಿ ಸೂರ್ಯದೇವನಲ್ಲಿ ಪ್ರಾರ್ಥಿಸಲಾಯಿತು.
ರೈತರ ಕೋರಿಕೆಯಂತೆ ಕಾಲುವೆಯಿಂದ ನೀರು ಹರಿಸದ ಕಾರಣ ಬೆಳೆದು ನಿಂತ ಬೆಳೆಗಳು ಒಣಗಿ ಹೋಗುತ್ತಿದ್ದು, ಸ್ವತಃ ನಾನೇ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆನು. ಆದಷ್ಟು ಬೇಗ ನೀರು ಹರಿದು ಬರಲಿದ್ದು, ಯಾವುದೇ ಕಾರಣಕ್ಕೂ ನನ್ನ ರೈತ ಬಂಧುಗಳು ಆತಂಕ ಪಡಬಾರದು ಎಂದು ಧೈರ್ಯ ತುಂಬಿದೆನು.
ಕಾಲುವೆಯ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದ್ದು ಅಧಿಕಾರಿಗಳು ಸಮರೋಪಾದಿಯಲ್ಲಿ ತೊಡಗಿಸಿಕೊಂಡಿರುವ ಕಾರಣ ಎಷ್ಟು ಬೇಗವೋ ಅಷ್ಟು ಬೇಗ ಕಾಲುವೆಯಿಂದ ರೈತರ ಜಮೀನುಗಳಿಗೆ ನೀರಿ ಹರಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ರೈತರ ಹಿತಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ.
ಇದೇ ವೇಳೆ ಈ ಭಾಗದ ರೈತರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸಿ, ಯಾವುದೇ ಕಾರಣಕ್ಕೂ ಧೃತಿಗೆಡದಂತೆ ತಿಳಿಸಿ, ನಿಮ್ಮೊಂದಿಗೆ ಸದಾ ಇರುತ್ತೇನೆಂದು ವಾಗ್ದಾನ ಮಾಡಿದೆನು. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ರೈತ ಮುಖಂಡರು, ರೈತರು ಉಪಸ್ಥಿತರಿದ್ದರು ಎಂದಿದ್ದಾರೆ.