ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಒಬ್ಬೊಬ್ಬರು ಕ್ಯಾಪ್ಟನ್ ಆಗುತ್ತಾರೆ. ಕ್ಯಾಪ್ಟನ್ ಸ್ಥಾನ ಮುಗಿದ ಬಳಿಕ ಮನೆ ಮಂದಿ ಬಳಿ ಅಭಿಪ್ರಾಯವನ್ನು ಕೇಳಲಾಗುತ್ತದೆ. ಅವರ ಅಧ್ಯಕ್ಷತೆ ಎಷ್ಟು ಇಷ್ಟವಾಯಿತು, ಎಷ್ಟು ಇಷ್ಟವಾಗಲಿಲ್ಲ ಎಂಬುದನ್ನು ಅವರವರ ಅಭಿಪ್ರಾಯ ತಿಳಿಸುತ್ತಾರೆ. ಇದೀಗ ಈ ವಾರ ಕ್ಯಾಪ್ಟನ್ ಆಗಿದ್ದ ದೀಪಿಕಾ ಬಗ್ಗೆ ಅಷ್ಟಾಗಿ ಮನೆ ಮಂದಿ ಸಮಾಧಾನಗೊಂಡಿಲ್ಲ ಎಂಬುದು ಸ್ಪಷ್ಟವಾದಂತಿದೆ.
ಇವತ್ತು ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮನೆ ಮಂದಿಯನ್ನೆಲ್ಲಾ, ದೀಪಿಕಾ ಕ್ಯಾಪ್ಟನ್ಸಿ ಬಗ್ಗೆ ಪ್ರಶ್ನಿಸಿದ್ದಾರೆ. ಹೇಗಿತ್ತು ಅವರ ಕ್ಯಾಪ್ಟೆನ್ಸಿ ಅಂತ. ಅದಕ್ಕೆ ಮನೆ ಮಂದಿಯೆಲ್ಲಾ ಒಂದೊಂದು ರೀತಿಯಲ್ಲಿ ಉತ್ತರ ಕೊಟ್ಟಿದ್ದು, ದೀಪಿಕಾ ಅವರ ನಾಯಕತ್ವ ಅಷ್ಟೇನು ಖುಷಿ ಕೊಟ್ಟಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಸ್ವಲ್ಪ ಫೇವರಿಸಂ ಇದ್ದದ್ದನ್ನು ಮನೆಯವರು ಹೊರ ಹಾಕಿದ್ದಾರೆ.
ರೂಪೇಶ್ ರಾಜಣ್ಣ : ಪ್ರಶ್ನೆಗೆ ನಿಮ್ಮಲ್ಲೆನಾದರೂ ಡೈಮೆನ್ಶನ್ ಉತ್ತರ ಇದೆಯಾ ಅಂತ ಅವರನ್ನು ಕೇಳುತ್ತಾರೆ. ಅದನ್ನ ನಾವೂ ಹೇಳು ಹೋದರು ಕೇಳುವುದಿಲ್ಲ.
ದೀಪಿಕಾ ದಾಸ್: ಎಲ್ಲೂ ಕೂಡ ನಾನು ಫೇವರಿಸಂ ಮಾಡಬೇಕು ಎಂಬ ಯಾವ ಇಂಟೆನ್ಶನ್ ಕೂಡ ಇರಲಿಲ್ಲ.
ದಿವ್ಯಾ ಉರುಡುಗ: ಕನ್ಸಿಡರ್ ಮಾಡಿಲ್ಲ ಅಂದರು ಪರವಾಗಿಲ್ಲ. ಅಟ್ಲಿಸ್ಟ್ ಅದನ್ನು ಕೇಳಿಸಿಕೊಳ್ಳಬೇಕಿತ್ತು. ಆದರೆ ಅದನ್ನು ಕೇಳಿಸಿಕೊಳ್ಳುವುದಕ್ಕೆ ರೆಡಿ ಇರಲಿಲ್ಲ.
ದೀಪಿಕಾ : ಒಬ್ಬರು ನನ್ನ ಮಾತನ್ನು ಕೇಳಿಸಿಕೊಳ್ಳುತ್ತಾ ಇರಲಿಲ್ಲ. ಎಲ್ಲರು ಒಟ್ಟಿಗೆ ಅಟ್ಯಾಕ್ ಮಾಡುತ್ತಾ ಇದ್ದರು.
ನೇಹಾ: ಅವರು ಮಾತಾಡಿದ್ದಂತ ಮಾತುಗಳು ನನಗೆ ಇಷ್ಟವಾಗಲಿಲ್ಲ.
ರಾಜಣ್ಣ: ಗೇಮಿಂದ ಕ್ಯಾಪ್ಟನ್ ಆಗಿರುವುದು ನಿಮ್ಮಿಂದ ಅಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದರು ಎಂದು ದೀಪಿಕಾ ಕ್ಯಾಪ್ಟೆನ್ಸಿ ಬಗ್ಗೆ ಸಾಲು ಸಾಲು ದೂರುಗಳನ್ನು ನೀಡಿದ್ದಾರೆ.