ರೈತ ಸಂಘದ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ ಚಿತ್ರದುರ್ಗ ಅಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಿ. ಈ. ಜಗದೀಶ್

suddionenews
1 Min Read

ಶಿವಮೊಗ್ಗ, (ಅ.23) : ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.  ಬಸವರಾಜಪ್ಪ ಅವರ ನಿವಾಸದಲ್ಲಿ ಚಿತ್ರದುರ್ಗ ಅಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಿ. ಈ. ಜಗದೀಶ್ ರವರು ಭೇಟಿ ಮಾಡಿ ಪ್ರಸ್ತುತ ರೈತರ ಸಮಸ್ಯೆಗಳು ಮತ್ತು ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.

ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹನುಮಂತಾಪುರದಲ್ಲಿರುವ ಹೆಚ್.ಆರ್.  ಬಸವರಾಜಪ್ಪ ನವರ ಮನೆಗೆ ಭೇಟಿ ನೀಡಿ,
ಚರ್ಚೆ ಮಾಡಿದರು.

ಬೆಳೆ ನಷ್ಟಕ್ಕೆ ಪರಿಹಾರ, ಈರುಳ್ಳಿ, ಕಬ್ಬು ಸೇರಿದಂತೆ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಣೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಸುವಂತೆ ರೈತರು ಮನವಿ ಮಾಡಿದರೂ ಸಹಾ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ.

ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಪರಿಹಾರವಿರುತ್ತದೆ. ಅದರಲ್ಲೂ ಉದ್ದಿಮೆದಾರರು ಕೋಟ್ಯಾಂತರ ರೂ. ಸಾಲವನ್ನು ಕೂಡ ಕೇಂದ್ರ ಸರಕಾರ ಮನ್ನಾ ಮಾಡಿದೆ. ದುರಂತವೆಂದರೆ ಅನ್ನ ಕೊಡುವ ರೈತ ಮಾಡಿದ ಸಾಲವನ್ನು ಮನ್ನಾ ಮಾಡಿ ಎಂದರೆ ಸೊಪ್ಪು ಹಾಕುವುದಿಲ್ಲ. ಕನಿಷ್ಠ ಪರಿಹಾರದ ಹಣವನ್ನಾದರೂ ನೀಡುತ್ತಿಲ್ಲ, ಇಂತಹ ರೈತ ವಿರೋಧಿ ಸರಕಾರಗಳ ವಿರುದ್ಧ ಧಿಕ್ಕಾರವಿರಲಿ ಎಂದು ಜಗದೀಶ್ ಅವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಎಎಪಿ ಸರ್ಕಾರ ರಚನೆಯಾದರೆ ನಮ್ಮ ಮೊದಲ ಆದ್ಯತೆ ಅನ್ನದಾತನಿಗೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೊಳಲ್ಕೆರೆ ಎಎಪಿ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಹೊಳಲ್ಕೆರೆ ತಾಲೂಕು ಸಂಘಟನಾ ಕಾರ್ಯದರ್ಶಿ ಆಡನೂರು ಶಿವಕುಮಾರ್ , ರವಿಕುಮಾರ್, ಈಶ್ವರಪ್ಪ, ಸೇರಿದಂತೆ ಪಕ್ಷದ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *