ಚಾಮರಾಜನಗರ: ಸಚಿವ ಸೋಮಣ್ಣ ಅವರು ಇಂದು ಮಹಿಳೆಯೊಬ್ಬರ ಜೊತೆ ನಡೆದುಕೊಂಡ ರೀತಿ, ಕಪಾಳ ಮೋಕ್ಷ ಮಾಡಿದ ಘಟನೆಗೆ ಖಂಡನೆ ವ್ಯಕ್ತವಾಗಿದೆ. ನನಗೆ ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವವಿದೆ. ಮಮಕಾರವಿದೆ. ಪ್ರಾಯಶಃ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ನಾನು ಕೂಡ ಬಡತನದಿಂದಲೇ ಬಂದಿರುವವನು. ಆ ಹೆಣ್ಣು ಮಗಳಿಗೆ ಹಕ್ಕು ಪತ್ರ ಕೊಡಿಸಿದ್ದೇನೆ. 45 ವರ್ಷಗಳ ಕಾಲ ರಾಜಕೀಯದಲ್ಲಿ ಏಳು ಬೀಳು ಕಂಡಿದ್ದೇನೆ. ಇದು ಬಡವರ ಕಾರ್ಯಕ್ರಮವೇ. ವೇದಿಕೆ ಮೇಲಿದ್ದಾಗ ಆ ಹೆಣ್ಣು ಮಗಳು ಪದೇ ಪದೇ ವೇದಿಕೆ ಮೇಲೆ ಬರುತ್ತಿದ್ದಳು. ತಾಯಿ ಎಷ್ಟು ಸಾರಿ ಬರ್ತೀಯಾ, ನಿನ್ನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಪಕ್ಕಕ್ಕೆ ಸರಿಸಿದೆ ಅಷ್ಟೇ ವಿನಃ ಬೇರೆ ಉದ್ದೇಶವಿಲ್ಲ ಎಂದಿದ್ದಾರೆ.