ಸದ್ಯ ಸರ್ಕಾರ ಸರ್ಕಾರಿ ಶಾಲೆಗಳ ಬಗ್ಗೆ ತೆಗೆದುಕೊಂಡಿರುವ ನಿರ್ಣಯದಿಂದ ಇಂತದ್ದೊಂದು ಪ್ರಶ್ನೆ ಉದ್ಭವವಾಗಿದೆ. ಸರ್ಕಾರದಿಂದ ಅಧಿಕೃತ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಪ್ರತಿ ತಿಂಗಳು ಪೋಷಕರು 100 ರೂಪಾಯಿ ದೇಣಿಗೆ ಕೊಡಬೇಕಂತೆ. ಈ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಶಾಲೆಯ ಅಭಿವೃದ್ದಿ ಕೆಲಗಳಿಗೆ ಈ ಹಣವನ್ನು ಬಳಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ. ಶಾಲೆಗಳಲ್ಲಿ ಬೇಕಾದ ಮೂಲ ಸೌಕರ್ಯಗಳಿಗೆ ಈ ಸೌಲಭ್ಯಕ್ಕಾಗಿ ಈ ಹಣವನ್ನು ಬಳಸಿಕೊಳ್ಳಬಹುದು. ಶಾಲೆಯ ಸಣ್ಣ ಪ್ರಮಾಣದ ದುರಸ್ತಿ, ಶಾಲಾ ಶುಚಿತ್ವ, ಶೈಕ್ಷಣಿಕ ಚಟುವಟಿಕೆ, ಶೌಚಾಲಯ, ವಿದ್ಯುತ್ ಬಿಲ್, ಶಾಲಾ ಪರಿಕರಗಳ ರಿಪೇರಿ, ಅಗತ್ಯ ಉಪಕರಣ ಖರೀದಿ, ಗಣಕ ಯಂತ್ರ ಖರೀದಿ, ಅಗತ್ಯವಿದ್ದಲ್ಲಿ ಅತಿಥಿ ಶಿಕ್ಷಕರ ಸಂಭಾವನೆಯನ್ನು ಅದರಲ್ಲಿಯೇ ನೀಡಬೇಕಂತೆ. ಇದು ಮೊದಲ ಆದ್ಯತೆ ನೀಡಲಾಗಿದೆ.
ಇನ್ನುಳಿದಂತೆ ದ್ವಿತಿಯ ಆದ್ಯತೆಯಲ್ಲಿ, ಮಕ್ಕಳ ಉಪಯೋಗಕ್ಕಾಗಿ ಡೆಸ್ಕ್ ಗಳು ಮತ್ತು ಬೆಂಚ್ ಗಳು. ಶಾಲಾ ಆಟದ ಮೈದಾನ ಸಿದ್ಧತೆ, ಇ ಕಲಿಕಾ ಕೇಂದ್ರ ಸ್ಥಾಪನೆ, ಗ್ರಂಥಾಲಯ, ಸ್ಕೌಟ್ಸ್ ಅಂಡ್ ಗೈಡ್ಸ್, ಎನ್ಸಿಸಿ ಇತ್ಯಾದಿ ಇತ್ಯಾದಿ. ಆದರೆ ಹಣವನ್ನು ಪೋಷಕರಿಂದ ಬಲವಂತವಾಗಿ ತೆಗೆದುಕೊಳ್ಳುವಂತಿಲ್ಲ ಎಂಬುದನ್ನು ಸುತ್ತೋಲೆಯಲ್ಲಿ ಹೊರಡಿಸಿದೆ. ಈ ಸುತ್ತೋಲೆ ನೋಡಿ ಬಜೆಟ್ ನಲ್ಲಿ ಸರ್ಕಾರಿ ಶಾಲೆಗೆ ಇಟ್ಟ ಹಣ ಎಲ್ಲಿ ಹೋಯ್ತು..? : ಪೋಷಕರ ಪ್ರಶ್ನಿಸುತ್ತಿದ್ದಾರೆ