ಕಳೆದ ಬಾರಿ ಪ್ರಧಾನು ಹುದ್ದೆಗೆ ಚುನಾವಣೆ ನಡೆದಾಗ ಕೂದಲಂತರದಲ್ಲಿ ರಿಷಿ ಸುನಕ್ ಅದೃಷ್ಟ ಬದಲಾಗಿತ್ತು. ಲಿಜ್ ಟ್ರಸ್ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು. ಬ್ರಿಟನ್ ನಲ್ಲಿ ಉಂಟಾಗಿರುವ ರಾಜಕೀಯ ಪ್ರಕ್ಷುಬ್ಧತೆಯಿಂದಾ ಲಿಜ್ ಟ್ರಸ್ 45 ದಿನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ಮತ್ತೆ ಪ್ರಧಾನಿ ಹುದ್ದೆಯನ್ನು ರಿಷಿ ಸುನಕ್ ಅಲಂಕರಿಸುವ ಸಮಯ ಹತ್ತಿರ ಬಂದಿದೆ.
ರಿಷಿ ಸುನಕ್ ಇಲ್ಲಿಯವರೆಗೂ 100 ಸಂಸದರ ಬೆಂಬಲ ಪಡೆಯುವಲ್ಲಿ ಮುಂದೆ ಸಾಗಿದ್ದಾರೆ. ಇಲ್ಲಿಯವರೆಗೂ 93 ಕನ್ಸರವೇಟಿವ್ ಸಂಸದರ ಬೆಂಬಲ ರಿಷಿ ಸುನಕ್ ಅವರಿಗೆ ಸಿಕ್ಕಿದೆ. ಪ್ರಧಾನಿಯಾಗುವ ಅರ್ಹತೆಗೆ 100 ಕನ್ಸರ್ವೇಟಿವ್ ಸಂಸದರ ಬೆಂಬಲ ಪಡೆಯುವಲ್ಲಿ ಮುಂದೆ ಇದ್ದಾರೆ. ಇನ್ನು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ 44 ಸಂಸದರ ಬೆಂಬಲದಿಂದ ಎರಡನೇ ಸ್ಥಾನದಲ್ಲಿದ್ದಾರೆ.
ಮುಂಬರುವ ಸವಾಲುಗಳನ್ನು ಹೇಗೆ ಎದುರಿಸಬೇಕೆಂಬುದು ರಿಷಿ ಅವರಿಗೆ ತಿಳಿದಿದೆ. ಪ್ರಧಾನಿಯಾಗಲು ಅವರು ಅರ್ಹ ವ್ಯಕ್ತಿ ಎಂದು ಮಾಜಿ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವೆದ್ ತಿಳಿಸಿದ್ದಾರೆ. ಇನ್ನು 100ನೇ ಸಂಸದ ನಾನಾಗುತ್ತೇನೆ ಎಂದು ಟೋಬಿಯಾಸ್ ಎಲ್ವುಡ್ ಅವರು ರಿಷಿಗೆ ಬೆಂಬಲ ಸೂಚಿಸಿದ್ದಾರೆ.