ಬೆಂಗಳೂರು : ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರ ಸೆಪ್ಟೆಂಬರ್ 30 ರಂದು ತೆರೆ ಕಂಡು ಕರ್ನಾಟಕ ಅಷ್ಟೇ ಅಲ್ಲದೇ ಹೊರ ರಾಜ್ಯ, ದೇಶ ಸೇರಿದಂತೆ ಪ್ರಪಂಚದಾದ್ಯಂತ ಅಪಾರ ಜನಮನ್ನಣೆ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದೆ. ಇದು ಭೂತ ಕೋಲದ ಕುರಿತಾದ ಚಿತ್ರವಾಗಿದ್ದು, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದಾರೆ.
60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು 2000 ರೂ. ಮಾಸಾಶನ ನೀಡುವುದಾಗಿ ಘೋಷಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಮತ್ತು ಸಚಿವರಾದ ಶ್ರೀ @karkalasunil ರವರಿಗೆ ಧನ್ಯವಾದಗಳು. pic.twitter.com/PrVjV2YAEf
— P C Mohan (@PCMohanMP) October 20, 2022
ಇದೀಗ 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಮಾಸಿಕ 2,000 ರೂ.ಗಳ ಭತ್ಯೆ ನೀಡಲು ಕರ್ನಾಟಕ ಸರ್ಕಾರ ಸಜ್ಜಾಗಿದೆ ಎಂದು ಗುರುವಾರ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಕಾಂತಾರ ಅವರನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
Adoring Daivas, dance, and divine intervention.
The BJP-led #Karnataka government has announced a Rs 2,000 monthly allowance for ‘Daiva Narthakas’ above 60 years of age.
Bhoota Kola, a spirit worship ritual depicted in the movie #Kantara is part of Hindu Dharma.@shetty_rishab pic.twitter.com/ll4aO1uwQp
— P C Mohan (@PCMohanMP) October 20, 2022
ಕಾಂತಾರ ಚಿತ್ರದಲ್ಲಿ ಕಂಬಳ ಮತ್ತು ಭೂತ ಕೋಲದ ಸಾಂಪ್ರದಾಯಿಕ ಸಂಸ್ಕೃತಿ ಬಗ್ಗೆ ತೋರಿಸಿದ್ದಾರೆ. ತಾರಾಗಣದಲ್ಲಿ ಕಿಶೋರ್, ಅಚ್ಯುತ್ ಕುಮಾರ್, ಪ್ರಕಾಶ್ ತುಮಿನಾಡ್, ಪ್ರಮೋದ್ ಶೆಟ್ಟಿ, ಮತ್ತು ನವೀನ್ ಡಿ ಪಡೀಲ್ ಸೇರಿದಂತೆ ಇತರರು ಅಭಿನಯಿಸಿದ್ದಾರೆ. ಈ ಚಿತ್ರ ಇದುವರೆಗೆ ಜಾಗತಿಕವಾಗಿ 171 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿದ್ದಾರೆ.