ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಅಂತರಾಷ್ಟ್ರೀಯ ಸಾಂಸ್ಕೃತಿಕ ಸ್ಕೌಟ್ ಅಂಡ್ ಗೈಡ್ ಜಾಂಬೂರಿ ಡಿ.21 ರಿಂದ 27 ರವರೆಗೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯಲ್ಲಿ ಕರ್ನಾಟಕ ರಾಜ್ಯ ಸ್ಕೌಟ್ ಅಂಡ್ ಗೈಡ್ ಸಂಸ್ಥೆಯಿಂದ ಪ್ರಥಮ ಬಾರಿಗೆ ಏಳು ದಿನಗಳ ಕಾಲ ನಡೆಯಲಿದೆ ಎಂದು ಗೈಡ್ ರಾಜ್ಯ ಸಂಘಟನಾ ಆಯುಕ್ತೆ ಮಂಜುಳ ಸಿ. ತಿಳಿಸಿದರು.
ಡಿ.ಡಿ.ಪಿ.ಐ.ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಭಾರತ್ ಸ್ಕೌಟ್ ಅಂಡ್ ಗೈಡ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತ ಡಾ.ಮೋಹನ್ ಆಳ್ವ ಇವರುಗಳ ನೇತೃತ್ವದಲ್ಲಿ ನಡೆಯುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಸ್ಕೌಟ್ ಅಂಡ್ ಗೈಡ್ ಜಾಂಬೂರಿಯಲ್ಲಿ ಹದಿನೇಳು ದೇಶಗಳಿಂದ ಐವತ್ತು ಸಾವಿರ ಮಕ್ಕಳು ಭಾಗವಹಿಸಲಿದ್ದಾರೆ. ಏಕ್‍ಭಾರತ್ ಶ್ರೇಷ್ಠ ಭಾರತ್ ಅಡಿ ಪ್ರತಿದಿನವೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಮಕ್ಕಳನ್ನು ಸಂಸ್ಕೃತಿಯಿಂದ ಸಂಸ್ಕಾರದ ಕಡೆಗೆ ಕರೆದುಕೊಂಡು ಹೋಗುವುದು ಜಾಂಬೂರಿಯ ಉದ್ದೇಶವಾಗಿದ್ದು, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕೃಷಿಗೆ ಸಂಬಂಧಿಸಿದ ವಸ್ತುಪ್ರದರ್ಶನ, ಪುಷ್ಪ, ಪುಸ್ತಕ, ನಮ್ಮ ದೇಶದ ವಿವಿಧ ರಾಜ್ಯಗಳ ವಿಭಿನ್ನ ಆಹಾರಗಳ ವಸ್ತು ಪ್ರದರ್ಶನವಿರುತ್ತದೆ. ಪುಲಿಕುಳ ತರಬೇತಿ ಕೇಂದ್ರ, ಕಲೆ, ಸಾಹಿತ್ಯ, ಸಂಸ್ಕøತಿ ಪರಂಪರೆಯನ್ನು ಇಲ್ಲಿ ಮಕ್ಕಳಿಗೆ ಪರಿಚಯಿಸಲಾಗುವುದು. ಓಟ್ಟು ಐವತ್ತು ಸಾವಿರ ಮಕ್ಕಳು ಜಾಂಬೂರಿಯಲ್ಲಿ ಪಾಲ್ಗೊಳ್ಳಲಿದ್ದು, 12 ರಿಂದ 22 ವರ್ಷ ವಯಸ್ಸಿನವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಮ್ಯಾರಥಾನ್ ಯೋಗ, ದೈಹಿಕ ಕಸರತ್ತು, ಸಾಂಸ್ಕøತಿಕ ಕ್ವಿಜ್ ಮೂಲಕ ಸ್ಕೌಟ್ ಅಂಡ್ ಗೈಡ್‍ನ ನೂರಾರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಹೊರತರಲಾಗುವುದು. ನಿರುದ್ಯೋಗ ಸಮಸ್ಯೆ, ಆಹಾರದ ಕೊರತೆ, ಓಜೋನ್ ಪರದೆ, ಜಂಗಲ್ ಟ್ರಯಲ್‍ನಲ್ಲಿ ಪ್ರಾಣಿ, ಪಕ್ಷಿ, ನೀರಿನ ಕಲರವ ಹೀಗೆ ಮಕ್ಕಳ ಮನಸ್ಸಿಗೆ ಮುದ ನೀಡುವ ಹತ್ತು ಹಲವಾರು ಕಾರ್ಯಕ್ರಮಗಳಿರುತ್ತವೆ. ಈ ಜಾಂಬೂರಿಗೆ ಪ್ರಧಾನಿ ನರೇಂದ್ರಮೋದಿ ಬರುವ ಸಾಧ್ಯತೆಗಳಿದ್ದು, ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಗಮಿಸುತ್ತಾರೆ. ವಿವಿಧ ಇಲಾಖೆಗಳ ಸಚಿವರುಗಳು ಪಾಲ್ಗೊಳ್ಳಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯಿಂದ ಒಂದುವರೆ ಸಾವಿರ ಮಕ್ಕಳನ್ನು ಕರೆದುಕೊಂಡು ಹೋಗಲಾಗುವುದು. ಮೂವತ್ತು ಕೋಟಿ ರೂ.ವೆಚ್ಚದಲ್ಲಿ ನಡೆಯುವ ಸಾಂಸ್ಕøತಿಕ ಸ್ಕೌಟ್ ಅಂಡ್ ಗೈಡ್ ಜಾಂಬೂರಿಯಲ್ಲಿ ವಸತಿ, ಗುಣ ಮಟ್ಟದ ಊಟ ಉಪಹಾರವಿರುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಸ್ಕೌಟ್ ಅಂಡ್ ಗೈಡ್ ಮುಖ್ಯ ಆಯುಕ್ತರುಗಳು ಹಾಜರಿರುತ್ತಾರೆಂದು ಮಾಹಿತಿ ನೀಡಿದರು.
ಸ್ಕೌಟ್ ಅಂಡ್ ಗೈಡ್ ಜಿಲ್ಲಾ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ ಏಳು ದಿನಗಳ ಕಾಲ ಮೂಡಬಿದರೆಯಲ್ಲಿ ನಡೆಯುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಸ್ಕೌಟ್ ಅಂಡ್ ಗೈಡ್ ಜಾಂಬೂರಿಯಲ್ಲಿ ಹದಿನೇಳು ದೇಶಗಳಿಂದ ಒಟ್ಟು ಐವತ್ತು ಸಾವಿರ ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಜಿಲ್ಲೆಯಿಂದ ಒಂದರಿಂದ ಒಂದುವರೆ ಸಾವಿರ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದರು.
ಜಿಲ್ಲಾ ಗೈಡ್ ಆಯುಕ್ತೆ ಸುನಿತಾ ಮಲ್ಲಿಕಾರ್ಜುನ್, ಹೆಚ್.ಕ್ಯೂ.ಸಿ. ಜಿ.ಎಸ್.ಉಜ್ಜಿನಪ್ಪ, ಜಿಲ್ಲಾ ಸಹ ಕಾರ್ಯದರ್ಶಿ ಡಾ.ರಹಮತ್‍ವುಲ್ಲಾ, ರೋವರ್ ಲೀಡರ್ ತಿಪ್ಪೇಸ್ವಾಮಿ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಮೋಹನ್‍ಕುಮಾರ್, ಎ.ಎಲ್.ಟಿ.ಸ್ಕೌಟ್ ಸಿ.ರವಿ, ಪಾಟೀಲ್, ಎಸ್.ಜಿ.ಸತ್ಯನಾರಾಯಣ ನಾಯ್ಡು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.