ದಾವಣಗೆರೆ: ಡಾಲಿ ಧನಂಜಯ್ ನಟಿಸಿ, ನಿರ್ಮಾಣ ಮಾಡಿರುವಂತ ಸಿನಿಮಾ ಹೆಡ್ ಬುಷ್ ಇದೇ ತಿಂಗಳ 21ಕ್ಕೆ ತೆರೆಗೆ ಬರುತ್ತಿದೆ. ಹೀಗಾಗಿ ದೊಡ್ಡಮಟ್ಟದಲ್ಲಿ ಈಗಾಗಲೇ ಪ್ರಚಾರ ಕಾರ್ಯ ಶುರುವಾಗಿದೆ. ನಿನ್ನೆ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಕ್ವೀಣ್ ರಮ್ಯಾ ಕೂಡ ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ಇದ್ದರೇನೆ ಎಷ್ಟೋ ಮಂದಿ ದಾವಣಗೆರೆ ದೋಸೆಯನ್ನು ಹುಡುಕಿಕೊಂಡು ಹೋಗಿ ತಿನ್ನುತ್ತೇವೆ. ಇನ್ನು ದಾವಣಗೆರೆಗೆ ಹೋದವರು ಬಿಡುವುದುಂಟೆ. ಹೆಡ್ ಬುಷ್ ಪ್ರಚಾರ ಕಾರ್ಯಕ್ಕೆ ಹೋದ ಮೋಹಕತಾರೆ ರಮ್ಯಾ ಕೂಡ ಈ ದೋಸೆಯ ಟೇಸ್ಟ್ ನೋಡಿದ್ದಾರೆ. ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ತಿಂದಿದ್ದಾರೆ.
ಬೆಣ್ಣೆ ದೋಸೆ ತಿಂದ ಬಳಿಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ದೋಸೆ ತಿಂದ ಮೇಲೆ ಅವರನ್ನು ನಾನು ಕೇಳಿದೆ. ಇಷ್ಟು ಚೆಂದವಾಗಿ ದೋಸೆ ಮಾಡಲು ಏನು ಕಾರಣ ಎಂದು. ಆದರೆ ಅವರು ನಿಜವಾದ ಕಾರಣ ಬಿಟ್ಟುಕೊಟ್ಟಿಲ್ಲ. ಬದಲಿಗೆ ಚಟ್ನಿ ಎಂದು ಹೇಳಿದ್ದಾರೆ. ಬೆಣ್ಣೆ ದೋಸೆಗೆ ಹಳ್ಳಿಯಿಂದಾನೆ ಬೆಣ್ಣೆ ಬರುತ್ತದೆಯಂತೆ ಹೀಗಾಗಿ ಈ ಟೇಸ್ಟ್ ಬರುವುದಕ್ಕೆ ಅದೇ ಕಾರಣ ಎನಿಸುತ್ತದೆ ಎಂದಿದ್ದಾರೆ ರಮ್ಯಾ.