Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ವಿಭಾಗ ಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾವಳಿ ಫಲಿತಾಂಶ ಪ್ರಕಟ

Facebook
Twitter
Telegram
WhatsApp

ಚಿತ್ರದುರ್ಗ (ಅ.15):  ಜಿಲ್ಲಾಡಳಿತ, ಜಿ.ಪಂ. ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಜರುಗಿದ 14, 17 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ, ಬಾಲಕಿಯರ ಬೆಂಗಳೂರು ವಿಭಾಗ ಮತ್ತು ರಾಜ್ಯ ಮಟ್ಟದ ಹೊನಲುಯ ಬೆಳಕಿನ ಹ್ಯಾಂಡ್‍ಬಾಲ್ ಪಂದ್ಯಾವಳಿಯ ಫಲಿತಾಂಶ ಪ್ರಕಟಗೊಂಡಿದೆ.

14 ವರ್ಷದೊಳಗಿನ ಬಾಲಕರ ವಿಭಾಗದ ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ ತುಮಕೂರು ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ದಾವಣಗೆರೆ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ.  14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ದಾವಣಗೆರೆ ಜಿಲ್ಲೆ ಪ್ರಥಮ ಸ್ಥಾನ ಹಾಗೂ ಚಿತ್ರದುರ್ಗ ಜಿಲ್ಲೆ ದ್ವಿತೀಯ ಸ್ಥಾನ ಪಡೆಯಿತು.  17 ವರ್ಷದೊಳಗಿನ ಬಾಲಕರ ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡರೆ, ಬೆಂಗಳೂರು ಉತ್ತರ ಜಿಲ್ಲೆ ದ್ವಿತೀಯ ಸ್ಥಾನ ಪಡೆಯಿತು.  ಬಾಲಕಿಯರ ವಿಭಾಗದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಚಿತ್ರದುರ್ಗ ಜಿಲ್ಲೆ ದ್ವಿತೀಯ ಸ್ಥಾನ ಪಡೆಯುವಲ್ಲಿ ಸಫಲವಾಯಿತು.

ವಿಜೇತ ತಂಡಗಳಿಗೆ ಪಂದ್ಯಾವಳಿ ಮುಕ್ತಾಯಗೊಂಡ ಬಳಿಕ ಟ್ರೋಫಿ ಹಾಗೂ ಪ್ರಮಾಣಪತ್ರ ನೀಡಲಾಯಿತು.  ಡಿಡಿಪಿಐ ಕೆ. ರವಿಶಂಕರ ರೆಡ್ಡಿ, ಎಸ್‍ಬಿಐ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ದಂಡಿಗದಾಸರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಪರಶುರಾಮಪ್ಪ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎ. ನೀಲಕಂಠಾಚಾರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

30 ವರ್ಷದ ಹಳೇ ಕಥೆ ಹೇಳಿದ ಶಿವರಾಮೇಗೌಡ : ಇಂಗ್ಲೆಂಡ್ ನಲ್ಲೂ ತಗಲಾಕಿಕೊಂಡಿದ್ರಂತೆ ರೇವಣ್ಣ..!

ಮಂಡ್ಯ: ಅಬ್ಬಬ್ಬಾ.. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ವಿಚಾರಗಳು ದಿನೇ‌ ದಿನೇ ಒಂದೊಂದು ವಿಚಾರಗಳು ಬೆಳಕಿಗೆ ಬರುತ್ತಿವೆ. ಕಳೆದ ಮೂವತ್ತು ವರ್ಷಗಳ ಹಿಂದೆಯೂ ಇಂಥದ್ದೊಂದು ಘಟನೆ ಅದರಲ್ಲೂ ಇಂಗ್ಲೆಂಡ್ ನಲ್ಲಿ‌ ನಡೆದಿತ್ತಂತೆ. ಈ

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

error: Content is protected !!