ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣಕ್ಕೆ ತೊಡಕಾಗಿರುವ ಅಬ್ಬಿನಹೊಳಲು ಪ್ರದೇಶದ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ವಾರದೊಳಗೆ ಅಲ್ಲಿನ ರೈತರು ಹಾಗೂ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳ ಸಭೆ ಕರೆಯುವುದಾಗಿ ಸಾಣೆಹಳ್ಳಿ ಪೀಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಭರವಸೆ ನೀಡಿದರು.
ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆ ಕುರಿತಂತೆ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಸಾಣೆಹಳ್ಳಿಗೆ ತೆರಳಿ ಪಂಡಿತಾರಾಧ್ಯ ಶ್ರೀಗಳ ಭೇಟಿಯಾಗಿ ಚರ್ಚಿಸಿದಾಗ ಈ ಭರವಸೆ ವ್ಯಕ್ತವಾಗಿದೆ. ಅಬ್ಬಿನಹೊಳಲು ಗ್ರಾಮದ ಬಳಿ 1.7 ಕಿಮೀ ಭೂ ಸ್ವಾ„ನ ಪ್ರಕ್ರಿಯೆಗೆ ಅಡಚಣೆಯಾಗಿರುವುದರಿಂದ ಇಡೀ ಯೋಜನೆ ಕಾಮಗಾರಿಗೆ ಸಮಸ್ಯೆಯಾಗಿದೆ. ನಾಲ್ಕಾರು ಮಂದಿ ರೈತರು ಪರಿಹಾರ ಮೊತ್ತ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಕಾಮಗಾರಿಗೆ ಅಡ್ಡಿ ಪಡಿಸುತ್ತಿದ್ದಾರೆ. ತಕ್ಷಣವೇ ಆ ರೈತರ ಕರೆಯಿಸಿ ಮಾತುಕತೆ ನಡೆಸಿ ಮನವೊಲಿಸುವಂತೆ ಸಮಿತಿ ಪದಾಧಿಕಾರಿಗಳು ಶ್ರೀಗಳಲ್ಲಿ ವಿನಂತಿಸಿದ್ದಾರೆ.
ಅಬ್ಬಿನಹೊಳಲು ಸಮಸ್ಯೆ ಬಗೆ ಹರಿದಿದ್ದರೆ ಇಷ್ಟೊತ್ತಿಗೆ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳ ತುಂಬಿಸಿಕೊಳ್ಳಬಹುದಿತ್ತು. ರೈತರು ಅಡ್ಡಿ ಪಡಿಸಿದ್ದರಿಂದ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಹಿಂಜರಿಕೆ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಸರ್ಕಾರ ಚಿಕ್ಕಮಗಳೂರು ಜಿಲ್ಲಾ„ಕಾರಿಗೆ ಸೂಚನೆ ನೀಡಿ ಕಾಮಗಾರಿಗೆ ಅಡಚಣೆಯಾಗದಂತೆ É ನೋಡಿಕೊಳ್ಳುವಂತೆ ನಿರ್ದೇಶನ ನೀಡಿದೆ. ಹಾಗಾಗಿ ಸಮಸ್ಯೆಯ ಸೌಹಾರ್ದಯುvವಾಗಿ ಬಗೆಹರಿಸುವ ಅಗತ್ಯವಿದೆ. ಹಿಂದೊಮ್ಮೆ ತಾವುಗಳು ಆ ರೈತರ ಬಳಿ ಮಾತನಾಡಿ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಿರಿ. ಹಾಗಾಗಿ ಮತ್ತೊಮ್ಮೆ ಪ್ರಯತ್ನಿಸಿ ರೈತರಿಗೆ ನೀರಾವರಿ ಯೋಜನೆ ಗಂಭೀರತೆ ಮನವರಿಕೆ ಮಾಡಿಕೊಡುವಂತೆ ಶ್ರೀಗಳಲ್ಲಿ ಕೋರಲಾಯಿತು.
ಈ ಸಾರಿ ಉತ್ತಮ ಮಳೆಯಾಗಿದೆ. ಬಹುತೇಕ ಕೆರೆ ಕಟ್ಟೆಗಳು ತುಂಬಿವಿ. ವಿವಿ ಸಾಗರ ಕೂಡಾ ಭರ್ತಿಯಾಗಿದೆ. ಹಾಗಾಗಿ ನೀರು ಲಿಫ್ಟ್ ಮಾಡಲು ರೈತರಿಂದ ಬೇಡಿಕೆ ಸಾಧ್ಯತೆ ಕಡಿಮೆ ಇದೆ. ಈ ಸಂದರ್ಭವನ್ನು ಕಾಮಗಾರಿ ಪೂರ್ಣಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಬಳಕೆ ಮಾಡಿಕೊಳ್ಳಬೇಕಾಗಿದೆ. ನಿಧಾನವಾದಷ್ಟೂ ಯೋಜನಾ ವೆಚ್ಚ ಜಾಸ್ತಿಯಾಗುತ್ತದೆ. ಹಾಗಾಗಿ ತಕ್ಷಣವೇ ರೈತರ ಜೊತೆ ಮಾತನಾಡುವಂತೆ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಹೋರಾಟ ಸಮಿತಿ ಪದಾ„ಕಾರಿಗಳ ಅಹವಾಲು ಆಲಿಸಿದ ನಂತರ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಹಿಂದೆ ಅಜ್ಜಂಪುರ ಬಳಿ ಸುರಂಗ ತೋಡುವಾಗ ರೈತರು ಅಡ್ಡಿ ಪಡಿಸಿದಾಗ ತಾವೇ ಕರೆದು ಸಮಾಧಾನ ಪಡಿಸಿ ಸಮಸ್ಯೆ ನಿವಾರಿಸಿದ್ದೆವು. ನೀರಾವರಿ ವಿಚಾರದಲ್ಲಿ ಉದಾಸೀನ ತೋರುವಂತಿಲ್ಲ. ಅದೇ ರೀತಿ ಪರಿಹಾರ ನೀಡುವಲ್ಲಿ ರೈತರಿಗೆ ತಾರತಮ್ಯವಾದರೆ ಅವರ ಪರವಾಗಿಯೂ ನಾವು ನಿಲ್ಲಬೇಕಾಗುತ್ತದೆ. ಇನ್ನೆರೆಡು ದಿನಗಳಲ್ಲಿ ಅಬ್ಬಿನಹೊಳಲು ಪ್ರದೇಶದ ರೈತರ ಕರೆಯಿಸಿ ಮಾತನಾಡುತ್ತೇನೆ. ಇದಾದ ಬಳಿಕ ಒಂದು ವಾರದಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳ ಕರೆಯಿಸಿ ಉಭಯ ರೈತರ ಸಮ್ಮುಖದಲ್ಲಿ ಸಮಸ್ಯೆ ಇತ್ಯರ್ಥ ಪಡಿಸಲು ಪ್ರಯತ್ನಿಸೋಣವೆಂದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು, ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಮುದ್ದಾಪುರ ನಾಗರಾಜ್, ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ಜಗಳೂರು ಭಾಗದ ಮುಖಂಡ ಜೆ.ಯಾದವರೆಡ್ಡಿ, ಸಂಗೇನಹಳ್ಳಿ ಅಶೋಕ್ ಕುಮಾರ್, ಅನಂತರೆಡ್ಡಿ, ಲಕ್ಷ್ಮಣ ರೆಡ್ಡಿ, ಸೈಯದ್ ಇಸಾಕ್ ಇದ್ದರು.