ಗದಗ: ಬಿಜೆಪಿ ಜನಸ್ಪಂದನಾ ಯಾತ್ರೆಯಲ್ಲಿ ಬ್ಯುಸಿಯಾಗಿದೆ. ನಾಯಕರೆಲ್ಲಾ ಒಂದೊಂದು ಜಿಲ್ಲೆಗೆ ಭೇಟಿ ನೀಡಿ ಜನಸ್ಪಂದನಾ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ನಿನ್ನೆ ಗದಗ ಜಿಲ್ಲೆಯಲ್ಲಿ ಜನಸ್ಪಂದನಾ ಯಾತ್ರೆ ನಡೆದಿದೆ. ಈ ವೇಳೆ ನಳಿನ್ ಕುಮಾರ್ ಕಟೀಲ್ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವಾಗಿ ಕಿಡಿಕಾರಿದ್ದಾರೆ. ಫೋಟೋ ಒಂದರ ಕಥೆ ಹೇಳಿ ವ್ಯಂಗ್ಯವಾಡಿದ್ದಾರೆ.
ವೇದಿಕೆಯಲ್ಲಿ ಮಾತನಾಡುತ್ತಾ, ದೆಹಲಿಯಲ್ಲಿರುವ ನನ್ನ ಮನೆಯಲ್ಲಿ ಎಲ್ಲಾ ನಾಯಕರ ಫೋಟೋ ಇದೆ. ಬೊಮ್ಮಾಯಿ ಅವರ ಫೋಟೋ ಮಾತ್ರ ಇರಲಿಲ್ಲ. ಹೀಗಾಗಿ ಉದಾಸಿ ಅವರನ್ನು ಕರೆದುಕೊಂಡು ದೆಹಲಿ ಮಾರ್ಕೆಟ್ ಗೆ ಹೋದೆವು. ಅಲ್ಲಿ ಎರಡು ಅಂಗಡಿಯಲ್ಲಿ ಕೇಳಿದೆವು ಇಲ್ಲ ಅಂದರು. ಮೂರನೇ ಅಂಗಡಿಯಲ್ಲಿ ಬೊಮ್ಮಾಯಿ ಫೋಟೋ ಬದಲಿಗೆ ಸಿದ್ದರಾಮಯ್ಯ ಫೋಟೋ ಕೊಟ್ಟರು.
ಉದಾಸಿಗೆ ಕೋಪ ಹೆಚ್ಚಾಗಿತ್ತು. ನಾವೂ ಕೇಳಿದ್ದು ಸಿಎಂ ಬೊಮ್ಮಾಯಿ ಅವರ ಫೋಟೋ. ಸಿದ್ದರಾಮಯ್ಯ ಅವರದ್ದಲ್ಲ ಎಂದರು. ಅದಕ್ಕೆ ಅಂಗಡಿಯವನು ಹೇಳಿದ ಬೊಮ್ಮಾಯಿ ಅವರ ಫೋಟೋ ಬಂದರೆ ಐದೇ ನಿಮಿಷಕ್ಕೆ ಖಾಲಿಯಾಗುತ್ತೆ. ಸಿದ್ದರಾಮಯ್ಯ ಅವರ ಫೋಟೋವನ್ನು ಯಾರು ತೆಗೆದುಕೊಳ್ಳುವುದಿಲ್ಲ ಎಂದಿದ್ದ. ಸಿದ್ದರಾಮಯ್ಯ ಯಾರಿಗೂ ಬೇಡದವನಾಗಿದ್ದಾನೆ ಎಂದು ಕಟೀಲು ವ್ಯಂಗ್ಯವಾಡಿದ್ದಾರೆ.