ನವೆದೆಹಲಿ: ಇಂದು ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿಜೆಐಗೆ ಪ್ರಕರಣ ವರ್ಗಾವಣೆ ಮಾಡಿದೆ. ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ತೀರ್ಪು ನೀಡಿದ ಪರಿಣಾಮ ಕೇಸ್ ವರ್ಗಾವಣೆಯಾಗಿದೆ. ಒಬ್ಬರು ಪರವಾಗಿ ನೀಡಿದ್ದರೆ ಇನ್ನೊಬ್ಬರು ವಿರುದ್ಧವಾಗಿ ನೀಡಿದ್ದಾರೆ.
ನ್ಯಾ.ಸುಧಾಂಶು ಆದೇಶದಲ್ಲಿ ಈ ಕೆಳಕಂಡಂತೆ ಇದೆ.
* ಇದು ಆರ್ಟಿಕಲ್ 19 ಮತ್ತು 25ಕ್ಕೆ ಸಂಬಂಧಿಸಿದ ಕೇಸಾಗಿದೆ.
* ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ್ದೇನೆ
* ಕರ್ನಾಟಕ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ್ದೇನೆ.
* ಹಿಜಾಬ್ ಅನ್ನೋದು ಕೇವಲ ಆಯ್ಕೆಯ ಪ್ರಶ್ನೆಯಾಗಿತ್ತು.
* ನನಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಶಿಕ್ಷಣ ಎಂದಿದ್ದಾರೆ.
ಇನ್ನು ನ್ಯಾ.ಹೇಮಂತ್ ಗುಪ್ತಾ ಅವರು ನೀಡಿದ ಆದೇಶ ಹೀಗಿದೆ:
* ನನ್ನ ಆದೇಶದಲ್ಲಿ 11 ಪ್ರಶ್ನೆಗಳನ್ನು ರೂಪಿಸಿದ್ದೇನೆ
* ಮೇಲ್ಮನವಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಹಿಸಬೇಕೆ..?
*ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಳ್ಳಬಹುದೇ..?
* ಸರ್ಕಾರದ ಆದೇಶ ಮೂಲಭೂತ ಹಕ್ಕನ್ನು ಉಲ್ಲಂಘೀಸುತ್ತದೆಯೇ..?
* ಹಿಜಾಬ್ ಧರಿಸಿದರೆ ಆರ್ಟಿಕಲ್ 25 ಉಲ್ಲಂಘನೆಯೇ..?
* ಹಿಜಾಬ್ ನಿರ್ಬಂಧಿಸಿದರೆ ಆರ್ಟಿಕಲ್ 25 ಉಲ್ಲಂಘನೆಯೇ..?
* ವಿದ್ಯಾರ್ಥಿಯು ತನ್ನ ಮೂಲಭೂತ ಹಕ್ಕು ಚಲಾಯಿಸಬಹುದೇ..?
* ಇಸ್ಲಾಂ ಧರ್ಮದ ಅಡಿಯಲ್ಲಿ ಹಿಜಾಬ್ ಧರಿಸಬಹುದೇ..?
* ಸರ್ಕಾರದ ಆದೇಶ ಶಿಕ್ಷಣದ ಉದ್ದೇಶವನ್ನು ಪೂರೈಸುತ್ತದೆಯೇ..?
* ನಾನು ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸುತ್ತೇನೆ ಎಂದಿದ್ದಾರೆ.