ಬೆಂಗಳೂರು: ಸರ್ಕಾರದಿಂದ ಓಲಾ-ಉಬರ್ ಆಟೋಗಳ ಆಟಾಟೋಪಕ್ಕೆ ಬ್ರೇಕ್ ಹಾಕಲು ನಿರ್ಧಾರ ಮಾಡಿಯಾಗಿದೆ. ಇದೀಗ ಆಟೋಗಳು ಸೀಝ್ ಆಗುವ ಆತಂಕ ಚಾಲಕರಿಗೆ ಶುರುವಾಗಿದೆ. ಇದೇ ಕಾರಣಕ್ಕೆ ಕೆಲವೊಂದಿಷ್ಟು ಆಟೋ ಡ್ರೈವರ್ ಗಳು ಆ್ಯಪ್ ಉಪಯೋಗಿಸದೆ ಇರುವುದಕ್ಕೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಗ್ರಾಹಕರಿಂದ ನಿಗದಿ ಹಣಕ್ಕಿಂತ ಹೆಚ್ಚಿನ ದರ ತೆಗೆದುಕೊಳ್ಳುತ್ತಿದ್ದ ಆರೋಪ ಓಲಾ ಮತ್ತು ಉಬರ್ ವಿರುದ್ಧ ಕೇಳಿ ಬರುತ್ತಿತ್ತು. ಹೀಗಾಗಿ ಉತ್ತರ ನೀಡುವಂತೆ ಸರ್ಕಾರ ಡೆಡ್ ಲೈನ್ ನೀಡಿದೆ. ಆದರೂ ಕಂಪನಿ ಡೋಂಟ್ ಕೇರ್ ನಡವಳಿಕೆ ಪ್ರದರ್ಶಿಸಿದೆ. ಹೀಗಾಗಿ ಮಂಗಳವಾರದಿಂದ ಆ್ಯಪ್ ಬಂದ್ ಮಾಡುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಆಟೋ ಚಾಲಕರು ಆತಂಕಗೊಂಡಿದ್ದು, ಆ್ಯಪ್ ನಿಂದ ಹೊರ ಬರುವ ನಡೆ ಪ್ರದರ್ಶಿಸಿದ್ದಾರೆ.