ಬೆಂಗಳೂರು: ಸಂಪುಟ ಅಭೆಯಲ್ಲೂ ಇಂದು ಎಸ್ಸಿ/ಎಸ್ಟಿ ಸಮುದಾಯಕ್ಕೆ ಮೀಸಲಾತಿ ಸಂಬಂಧಿಸಿದಂತೆ ಒಪ್ಪಿಗೆ ಸಿಕ್ಕಿದೆ. ಎಸ್ಸಿಗೆ 15ರಿಂದ 17 ಹಾಗೂ ಎಸ್ಟಿಗೆ 3 ರಿಂದ 7ಕ್ಕೆ ಹೆಚ್ಚಳ ಮಾಡಲಾಗಿದೆ. ಇದನ್ನು ಇಂದು ಕೂಡಲೆ ಆದೇಶ ಮಾಡಲು ಮತ್ತು ಗೆಜೆಟ್ ನೋಟಿಫಿಕೇಷನ್ ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಇನ್ನು ಮೀಸಲಾತಿ ಹೆಚ್ಚಳದ ಆದೇಶಕ್ಕೆ ಕಾನೂನಿನಲ್ಲಿ ಬಿಗಿಗೊಳಿಸಿದ್ದಾರೆ. ಈ ಕಾಯ್ದೆಗೆ ರಕ್ಷಣೆ ನೀಡಲು ಪರಿಚ್ಛೇದ 9 ಅನ್ನು ಸೇರಿಸಲು ಬೇಕಾದ ಕಾನೂನುಗಳನ್ನು ರೂಪಿಸಲು ಬೇಕಾದ ಕಾನೂನು ನಿಯಮಗಳನ್ನು ಪಾಲಿಸಲು ಕಾನೂನು ತಜ್ಞರೊಂದಿಗೆ ಚರ್ಚಿಸಿ ಕೂಡಲೇ ಶಿಫಾರಸು ಮಾಡಲು ಅನುಷ್ಠಾನ ಮಾಡೋ ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇನ್ನು ಅಲೆಮಾರಿ ಪ.ಜಾತಿ ಮತ್ತು ಪಂಗಡ ಸಲುವಾಗಿ ನಿಗಮಮಾಡಲು ನಾಗಮೋಹನ್ ದಾಸ್ ವರದಿಯಲ್ಲಿ ಹೇಳಿದ್ದರು. ಅದನ್ನು ಮಾಡಲು ತೀರ್ಮಾನ ಮಾಡಲಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ದೂರ ಇರುವ ಸಮುದಾಯಗಳಿಗೆ ಮೀಸಲಾತಿ ನೀಡಲು ಇಂದ್ರ ಸಾಹ್ನಿ ಕೇಸಿನಲ್ಲಿ ಉದಾಹರಣೆ ಇದೆ. ಇದು ಏಕೆ ವಿಶೇಷ ವರದಿ ಎಂಬುದನ್ನು ಈಗಾಗಲೇ ವರದಿಯಲ್ಲಿ ಅಂಕಿ ಅಂಶಗಳೊಂದಿಗೆ ಸ್ಪಷ್ಟಪಡಿಸಲಾಗಿದೆ ಎಂದಿದ್ದಾರೆ.