ಬೆಂಗಳೂರು: ಶೀಘ್ರವೇ ಪರೇಶ್ ಮೆಸ್ತಾ ಕುಟುಂಬದಿಂದ ಕಾನೂನು ಹೋರಾಟ ನಡೆಯಲಿದೆ. ಸಿಬಿಐ ವರದಿ ಬೆನ್ನಲ್ಲೇ ಕಾನೂನು ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪರೇಶ್ ಮೆಸ್ತಾ ಕೇಸ್ ಮರು ತನಿಖೆ ನಿಶ್ಚಿತವಾಗಿದೆ. ಸಿಬಿಐ ಕೋರ್ಟ್ ಗೆ ನೀಡಿದ ವರದಿಯನ್ನು ನಾವೂ ತೆಗೆಸುತ್ತಾ ಇದ್ದೀವಿ. ಇನ್ನು ಮೆಸ್ತಾ ಅವರ ತಂದೆ ಹೇಳಿದ್ದಾರೆ. ನನ್ನ ಮಗನ ಕೊಲೆಯಾಗಿದೆ. ಕೊಂದು ತೆಗೆದುಕೊಂಡು ಹೋಗಿ ಅಲ್ಲಿ ಎಸೆದಿದ್ದಾರೆ ಎಂದು. ಈ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಲಾಗುತ್ತೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪರೇಶ್ ಮೆಸ್ತಾ ಸಾವಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದರು. ಹತ್ಯೆಯಲ್ಲ ಆಕಸ್ಮಿಕ ಸಾವು ಎಂದು ವರದಿ ಸಲ್ಲಿಸಲಾಗಿದೆ. ಇದರ ವಿಚಾರಣೆ ನಡೆಸಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನ್ಯಾಯಪೀಠವು ಮುಂದಿನ ತಿಂಗಳು ಅಂದರೆ ನವೆಂಬರ್ 16ಕ್ಕೆ ತೀರ್ಪು ಕಾಯ್ದಿರಿಸಿದೆ. ಇದರ ನಡುವೆ ಸಚಿವ ಆರಗ ಜ್ಞಾನೇಂದ್ರ ಮತ್ತೆ ಕೇಸ್ ಓಪನ್ ಮಾಡಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ.