ಬೀದರ್: ಜಿಲ್ಲೆಯ ಗವಾನ್ ಮಸೀದಿ ಸದ್ಯ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಮಸೀದಿಯೊಳಗೆ ಹಿಂದೂಗಳು ನುಗ್ಗಿ ಪೂಜೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಸೀದಿಯಲ್ಲಿ ಅಕ್ರಮ ಪ್ರವೇಶದ ಆರೋಪ ಕೇಳಿ ಬಂದಿದೆ. ಮಸೀದಿಯಲ್ಲಿ ಪೂಜೆ ಮಾಡಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಪೂಜೆ ಮಾಡಿದ ಆರೋಪದಡಿ 9 ಹಿಂದೂಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರಕರಣ ಸಂಬಂಧ ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮುನ್ನಾ, ನರೇಶ್, ಯಲ್ಲಾಲಿಂಗ, ಪ್ರಕಾಶ್ ಎಂಬುವವರನ್ನು ಬಂಧಿಸಲಾಗಿದೆ. ದಸರಾ ಹಬ್ಬದ ಪ್ರಯುಕ್ತ ಕಾಳಿಕಾ ಮಾತೆಯ ಪಲ್ಲಕ್ಕಿ ಉತ್ಸವ ನೆರವೇರಿತ್ತು. ಕಾಳಿಕಾ ಮಾತೆ ಪಲ್ಲಕ್ಕಿ ಮೆರವಣಿಗೆ ಮಾಡಿದ್ದ ಆರೋಪ ಕೇಳಿ ಬಂದಿದೆ. ಪೂಜೆ ವೇಳೆ ಹಿಂದೂಗಳು ಘೋಷಣೆ ಕೂಗಿದ ಮಾಹಿತಿಯನ್ನು ಕಲೆ ಹಾಕಲಾಗಿದೆ. ಮಸೀದಿಯಲ್ಲಿ ಕಾಯಿ ಒಡೆದು, ಕುಂಕುಮ ಹಚ್ಚಿರುವ ಆರೋಪ ಕೇಳಿ ಬಂದಿದೆ.
ಮುಂಜಾಗ್ರತ ಕ್ರಮವಾಗಿ ಮಸೀದಿ ಬಂದ್ ಮಾಡಲಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಸೀದಿಯೊಳಗೆ ಪ್ರಾರ್ಥನೆಗೆ ನಿರ್ಬಂಧ ಹೇರಲು ಚಿಂತನೆ ನಡೆಸಿದ್ದಾರೆ. ಮಸೀದಿ ಎದುರು ಸಾವಿರಾರು ಜನ ಜಮಾಯಿಸಿದ್ದಾರೆ.