ಬೆಂಗಳೂರು: ಅಕ್ಟೋಬರ್ 17ರಂದು ಎಐಸಿಸಿ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಶಶಿ ತರೂರ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ನಡುವೆ ಸ್ಪರ್ಧೆಯಿದ್ದರು ಕಾಂಗ್ರೆಸ್ ಗೆ ಖರ್ಗೆ ಮೇಲೆ ಒಲವಿದೆ. ಈ ನಡುವೆ ಸಿಟಿ ರವಿ ಅಧ್ಯಕ್ಷೀಯ ಚುನಾವಣೆ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಡ್ರಾಮಾ ನಡೆಯುತ್ತಿದೆ. ಬೇಕಾದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಕೇಳಿ. ಅದು ಸ್ವಇಚ್ಛೆಯಿಂದ ಅಲ್ಲ ಕುಟುಂಬ ಒಪ್ಪಿದರೆ ಮಾತ್ರ ಎಂದು ಎಐಸಿಸಿ ಚುನಾವಣೆ ಬಗ್ಗೆ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. 50 ವರ್ಷ ರಾಜಕೀಯ ಮಾಡಿದವರಿಗೆ ಇದು ಆಗಬಾರದು. ಇದು ಮಲ್ಲಿಕಾರ್ಜುನ ಖರ್ಗೆಯವರ ವ್ಯಕ್ತಿತ್ವಕ್ಕೆ ಅಲ್ಲ. ಜೀತಪದ್ಧತಿಯ ಮನೋಭಾವನೆ ಇರಬಾರದು ಎಂದಿದ್ದಾರೆ.