ವಿಚ್ಛೇದನಕ್ಕೆ ಹೋಗಿದ್ದ ರಜನಿಕಾಂತ್ ಮಗಳು-ಅಳಿಯ ಮತ್ತೆ ಒಂದಾಗುತ್ತಿದ್ದಾರೆ

ಕಳೆದ ಕೆಲವು ವರ್ಷಗಳಿಂದ ದೊಡ್ಡ ದೊಡ್ಡ ಸ್ಟಾರ್ ಗಳ ವೈವಾಹಿಕ ಜೀವನವೇ ಅಂತ್ಯವಾಗುತ್ತಿರುವುದನ್ನು ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಮಿರ್ ಖಾನ್ ದಂಪತಿ ದೂರಾದರು, ಸಮಂತಾ – ನಾಗಚೈತನ್ಯ ದೂರಾದರೂ ಇದಾದ ಬಳಿಕ ರಜನೀಕಾಂತ್ ಪುತ್ರಿ ಸೌಂದರ್ಯ – ನಟ ಧನುಶ್ ವೈವಾಹಿಕ ಜೀವನವೂ ಮುರಿದು ಬಿತ್ತು. ಮಗಳ ಜೀವನದ ಬಗ್ಗೆ ರಜನೀಕಾಂತ್ ತುಂಬಾ ಚಿಂತಾಕ್ರಾಂತರಾಗಿದ್ದರು ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಇದೀಗ ಐಶ್ವರ್ಯಾ ಹಾಗೂ ಧನುಶ್ ಮತ್ತೆ ಒಂದಾಗುತ್ತಿದ್ದಾರೆ ಎಂಬ ಖುಷಿ ಸುದ್ದಿ ಸಿಕ್ಕಿದೆ.

ಕಳೆದ ಒಂಭತ್ತು ತಿಂಗಳ ಹಿಂದೆಯೇ ಐಶ್ವರ್ಯಾ ಹಾಗೂ ಧನುಶ್ ವಿಚ್ಛೇದನ ಘೋಷಿಸಿದ್ದರು. ಇದಾದ ಬಳಿಕ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಈ ವಿಚಾರವಾಗಿ ನೊಂದುಕೊಂಡಿದ್ದರು. ಕುಟುಂಬಸ್ಥರು ಸಾಕಷ್ಟು ಪ್ರಯತ್ನಪಟ್ಟರು ಇಬ್ಬರು ಕೂಡ ಒಪ್ಪಲಿಲ್ಲ. ಆದರೆ ಇದೀಗ ಇಬ್ಬರು ಡಿವೋರ್ಸ್ ವಾಪಾಸ್ ಪಡೆದು ಒಂದಾಗುತ್ತಿದ್ದಾರೆ.

ರಜನೀಕಾಂತ್ ಮಗಳನ್ನು ಕೂರಿಸಿಕೊಂಡು ಭವಿಷ್ಯದ ಬಗ್ಗೆ ಮಾತನಾಡಿದ್ದಾರಂತೆ. ಮಕ್ಕಳ ಭವಿಷ್ಯವನ್ನೆಲ್ಲಾ ತಿಳಿಸಿದಾಗ ತಂದೆಯ ಮಾತಿಗೆ ಬೆಲೆ ಕೊಟ್ಟು ಮತ್ತೆ ಒಂದಾಗುತ್ತಿದ್ದಾರೆ ಎಂಬ ಮಾತು ತಮಿಳು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾಗಲೂ ಹಲವು ಬಾರಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಮಕ್ಕಳ ಜೊತೆಗೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *