ಮೈಸೂರು: ಇಂದು ನಾಡಹಬ್ಬ ದಸರಾ ಸಂಭ್ರಮ ಎಲೆಲ್ಲೂ ಕಳೆಗಟ್ಟಿದೆ. ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ತಾಯಿಯ ಉತ್ಸವ ಮೂರ್ತಿ ಅರಮನೆಯ ಕಡೆಗೆ ಹೊರಟಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಉತ್ಸವ ಮೂರ್ತಿಗೆ ಪೂಹೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಇನ್ನು ತಾಯಿ ಉತ್ಸವ ಮೂರ್ತಿ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಅರಮನೆ ತಲುಪಲಿದೆ. ಅರಮನೆಗೆ ಸಾಗುವ ದಾರಿಯಲ್ಲಿ ತಾಯಿಯ ದರ್ಶನ ಪಡೆದುಕೊಳ್ಳಲು ರಸ್ತೆಯಲ್ಲಿ ಉದ್ದಕ್ಕೂ ಭಕ್ತ ಸಮೂಹ ನಿಂತಿದೆ.
ಇನ್ನು ಉತ್ಸವ ಮೂರ್ತಿಗೆ ಚಾಲನೆ ಕೊಟ್ಟ ಬಳಿಕ ಮಾತನಾಡಿದ ಸಿಎಂ, ಇಂದು ಮಹಿಷಾಸುರನನ್ನು ವಧೆ ಮಾಡಿರುವುದು ವ ದಿನ. ಜನರಿಗೆ ಮಂಗಳ ಉಂಟಾಗಲಿ. ಎಲ್ಲರಿಗೂ ಒಳ್ಳೆಯದು ಮಾಡಲಿ. ಅತ್ಯಂತ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯಲಿದೆ. ಜನರು ಶಾಂತಿಯಿಂದ ಪಾಲ್ಗೊಂಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.