ಮುಂಬೈ : ದೇಶದಲ್ಲಿ ಹಲವೆಡೆ ಹಸುಗಳಲ್ಲಿ ಗಂಟು ರೋಗ ಕಾಣಿಸಿಕೊಂಡಿದೆ. ಈ ರೋಗದಿಂದಾಗಿ ಪಶುಗಳು ಸಾವನ್ನಪ್ಪುತ್ತಿವೆ. ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಈ ರೋಗ ಕಾಣಿಸಿಕೊಂಡಿದೆ. ಈ ವಿಚಾರವಾಗಿ ಮಾತನಾಡುತ್ತಿದ್ದ, ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ನೀಡಿದ ಹೇಳಿಕೆಗೆ ಈಗ ಭಾರೀ ವಿರೋಧ ವ್ಯಕ್ತವಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ, ಪ್ರಧಾನಿ ಮೋದಿಯವರು ನಮೀಬಿಯಾದಿಂದ ಭಾರತಕ್ಕೆ ತರಿಸಿರುವ ಚೀತಾಗಳಿಂದಾನೇ ಲಂಪಿ ವೈರಸ್ ಹರಡಿದೆ. ನಮೀಬಿಯಾದಲ್ಲಿ ಕೆಲ ಸಮಯದಿಂದ ಲಂಪಿ ವೈರಸ್ ಹರಡಿತ್ತು. ಆದರೆ ಪ್ರಧಾನಿ ಮೋದಿ ಬೇಕು ಅಂತಾನೇ ಅಲ್ಲಿಂದ ಚೀತಾಗಳನ್ನು ತರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ. ಉದ್ದೇಶಪೂರ್ವಕವಾಗಿ ಚೀತಾಗಳನ್ನು ಭಾರತಕ್ಕೆ ಕರೆತರಲಾಗಿದೆ. ರೈತರಿಗೆ ನಷ್ಟ ಉಂಟು ಮಾಡಲೆಂದೆ ಈ ರೀತಿ ಮಾಡಲಾಗಿದೆ ಎಂದಿದ್ದಾರೆ.
ಇನ್ನು ಕಳೆದ ತಿಂಗಳು ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನ ಸೆಪ್ಟೆಂಬರ್ 17ರಂದು ಭಾರತಕ್ಕೆ ಎಂಟು ಚೀತಾಗಳನ್ನು ತರಲಾಗಿತ್ತು. ಭಾರತದಲ್ಲಿ ನಶಿಸಿ ಹೋಗಿದ್ದ ಚೀತಾ ತಳಿಗಳನ್ನು ತರಿಸಲಾಗಿತ್ತು. ಈ ಚೀತಾಗಳನ್ನು ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್ ನಲ್ಲಿ ಬಿಡಲಾಗಿದೆ.