ಬೆಂಗಳೂರು : ಇತ್ತೀಚೆಗೆ ಬಿಡುಗಡೆಯಾದ ಪ್ರಭಾಸ್ ಆದಿಪುರುಷ ಚಿತ್ರದ ಟೀಸರ್ ಗೆ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೀಸರ್ ಅದ್ಭುತವಾಗಿದೆ ಎಂದು ಕೆಲವರು ಹೊಗಳಿದರೆ, ಇನ್ನು ಕೆಲವರು ಇದೊಂದು ಕಾರ್ಟೂನ್ ಸಿನಿಮಾದಂತಿದೆ ಎಂದು ಟೀಕಿಸುತ್ತಿದ್ದಾರೆ.
ಹಲವು ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿರುವ ಟೀಸರ್ ನಿರಾಸೆ ಮೂಡಿಸಿದೆ ಎನ್ನಲಾಗಿದೆ. ಇದೇ ವೇಳೆ ಬಿಜೆಪಿ ವಕ್ತಾರೆ, ನಟಿ ಮಾಳವಿಕಾ ಅವಿನಾಶ್ ಅವರು ಟೀಸರ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಿತ್ರದ ನಿರ್ದೇಶಕ ಓಂ ರಾವುತ್ ವಿರುದ್ಧ ವಾಗ್ದಾಳಿ ನಡೆಸಿ, ರಾಮಾಯಣವನ್ನು ಅಧ್ಯಯನ ಮಾಡದೆ ಸಿನಿಮಾ ಮಾಡಿದ್ದೀರಾ ? ಎಂದು ಟ್ವೀಟ್ ಮಾಡಿದ್ದಾರೆ.
Ravana,a Shiva-Bhakta Brahmin from Lanka had mastered the 64 arts!Jaya(Vijay) who was guarding Vaikunta descended as Ravana owing to a curse!
This may be a Turkish tyrant but is not Ravana!
Bollywood,Stop misrepresenting our Ramayana/History!Ever heard of the legend NTRamaRao? pic.twitter.com/tGaRrsSQJW— Malavika Avinash (@MalavikaBJP) October 3, 2022
ಲಂಕಾದ ರಾವಣ ಶಿವನ ಭಕ್ತ ಬ್ರಾಹ್ಮಣ. ಅವರು 64 ಕಲೆಗಳನ್ನು ಕರಗತ ಮಾಡಿಕೊಂಡಿದ್ದರು. ವೈಕುಂಠವನ್ನು ರಕ್ಷಿಸುತ್ತಿದ್ದ ಜಯ ಶಾಪದಿಂದ ರಾವಣನಾಗಿ ಅವತರಿಸಿದ. ಆದರೆ ಬಾಲಿವುಡ್ ನಿರ್ದೇಶಕರು ನಮ್ಮ ಇತಿಹಾಸ ಮತ್ತು ರಾಮಾಯಣವನ್ನು ತಪ್ಪಾಗಿ ತೋರಿಸುತ್ತಿದ್ದಾರೆ. ಇದನ್ನು ಮೊದಲು ನಿಲ್ಲಿಸಿ’ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ನಿರ್ದೇಶಕ ಓಂ ರಾವುತ್. ವಾಲ್ಮೀಕಿಯ ರಾಮಾಯಣ ಮತ್ತು ತುಳಸೀದಾಸರ ರಾಮಾಯಣವನ್ನು ಅಧ್ಯಯನ ಮಾಡಿಲ್ಲ. ಇದುವರೆಗೆ ಬಿಡುಗಡೆಯಾಗಿರುವ ಪೌರಾಣಿಕ ಸಿನಿಮಾಗಳಲ್ಲಿ ರಾವಣನ ಪಾತ್ರವಾದರೂ ಏನಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ಕಿಡಿಕಾರಿದ್ದಾರೆ.