ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್, ಮೊ : 8722022817
ಚಿತ್ರದುರ್ಗ,(ಸೆ.30) : ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಉತ್ತಮ ಶಿಕ್ಷಕರಾಗಿ ಆಯ್ಕೆಯಾದ ನೀವುಗಳು ಉತ್ತಮ ರಾಷ್ಟ್ರ ನಿರ್ಮಾಣ ಮಾಡುವ ಮಕ್ಕಳನ್ನು ನೀಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ತಿಳಿಸಿದರು.
ನಗರದ ರೋಟರಿಬಾಲ ಭವನದಲ್ಲಿ ರೋಟರಿಕ್ಲಬ್ ವತಿಯಿಂದ ನಡೆದ ನ್ಯಾಷನಲ್ ಬಿಲ್ಡರ್ಸ್ ಅವಾರ್ಡ್ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೋಟರಿ ಕ್ಲಬ್ ನವರು ನಿಮ್ಮನ್ನು ಗುರುತಿಸಿ ಈ ಆವಾರ್ಡ ನೀಡಿದ್ದಾರೆ. ಉತ್ತಮವಾದ ಕೆಲಸವಾಗಿದೆ. ಚಿತ್ರದುರ್ಗ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ನೀಡುತ್ತಿದ್ದಾರೆ. ಮಕ್ಕಳೇ ಇವರನ್ನು ಆರಿಸಿ ಈ ಆವಾರ್ಡ್ ಸಿಗುವಂತೆ ಮಾಡಿದ್ದಾರೆ ಎನ್ನುವುದು ಇಲ್ಲಿ ಉಲ್ಲೇರ್ಖವಾಗಿದೆ ಎಂದರು.
ರೋಟರಿ ಕ್ಲಬ್ ಚಿತ್ರದುರ್ಗದಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತಿದೆ. ಸರ್ಕಾರಿ ಶಾಲೆಗಳಿಗೆ ಬೇಟಿ ನೀಡಿ ಅಲ್ಲಿನ ಕೂರತೆಗಳನ್ನು ಪತ್ತೇ ಮಾಡಿ ಅದನ್ನು ಪೂರ್ತಿ ಮಾಡುತ್ತಿದ್ದಾರೆ. ಹಲವಾರು ಶಾಲೆಗಳಿಗೆ ಬೆಂಚುಗಳು, ಕಂಪ್ಯೂಟರ್, ಸ್ಮಾಟ್ ಶಾಲೆಗಳಿಗೆ ಬೇಕಾದ ಸೌಲಭ್ಯವನ್ನು ನೀಡಿದ್ದಾರೆ. ಸರ್ಕಾರವೂ ಸಹಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ, ಇದರ ಮೂಲಕ ಶೇ.100 ರಷ್ಟು ಸಾಕ್ಷರತೆಯ ಮೂಲಕ ಅಕ್ಷರ ಜ್ಞಾನವನ್ನು ನೀಡುತ್ತಿದೆ. ಗುಣಾತ್ಮಕವಾದ ಶಿಕ್ಷಣವನ್ನು ನೀಡುವಲ್ಲಿ ನಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ ಶಿಕ್ಷಣ ಇಲಾಖೆ ಇವರ ಎಲ್ಲಾ ಕಾರ್ಯಕ್ರಮಗಳಿಗೂ ಶಿಕ್ಷಕರ ಎಲ್ಲಾ ಸಾಧನೆಗೂ ಸಹಾ ಸಹಾಯ ಸಹಕಾರ ನೀಡಲಿದೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿಕ್ಲಬ್ ಅಧ್ಯಕ್ಷರಾದ ಮಾಧುರಿ ಮಧುಪ್ರಸಾದ್ ಮಾತನಾಡಿ, ರೋಟರಿ ಕ್ಲಬ್ ಹಲವಾರು ವರ್ಷಗಳಿಂದ ವಿವಿಧ ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಆರೋಗ್ಯ ಶಿಬಿರ, ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವುದು, ಪೋಲಿಯೋ, ಕ್ಯಾಸ್ಸರ್, ವಿಕಲಚೇತನರಿಗೆ ಕಾಲು, ಕೈಗಳನ್ನು ಹಾಕಿಸುವುದು, ಕರೋನದಂತಹ ಮಾರಿ ರೋಗವನ್ನು ನಿಯಂತ್ರಣ ಮಾಡುವಲ್ಲಿ ಜನ ಜಾಗೃತಿಯನ್ನು ಮೂಡಿಸುವುದು ಮತ್ತು ಶಿಬಿರವನ್ನು ಮಾಡುವುದರಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಜಯಶ್ರೀ ಷಾ, ಶ್ರೀಮತಿ ಗಾಯತ್ರಿ ಶಿವರಾಂ, ವಿಶ್ವನಾಥ್, ಭಾಗ್ಯ ಭಾಗವಹಿಸಿದ್ದರು ಈ ಸಂದರ್ಭದಲ್ಲಿ 26 ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು.