Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಿಂಚಣಿ ಯೋಜನೆಗಳು ಮುಪ್ಪಿನ ಕಾಲದಲ್ಲಿ  ಆರ್ಥಿಕ ಶಕ್ತಿ ತುಂಬುತ್ತವೆ : ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

Facebook
Twitter
Telegram
WhatsApp

 

ಚಿತ್ರದುರ್ಗ,( ಸೆಪ್ಟಂಬರ್ 30) :  ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಎಲ್ಲಾ ವರ್ಗದ ಜನರಿಗೂ ಸಿಗಬೇಕು ಇದರಿಂದ ಮುಪ್ಪಿನ ಕಾಲದಲ್ಲಿ  ಆರ್ಥಿಕ ಶಕ್ತಿಯನ್ನು ತುಂಬುತ್ತವೆ ಎಂದು ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ  ಹಾಗೂ ನಗರ ಪ್ರದೇಶದ ಜನರಿಗೆ ಸರ್ಕಾರದ ಯೋಜನೆಗಳಾದ ವಿಧವಾ ವೇತನ, ಅಂಗವಿಕಲರ ವೇತನ, 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಎಲ್ಲಾ ಫಲಾನುಭವಿಗಳಿಗೂ ತಲುಪಬೇಕು ಹಾಗಾಗಿ ನೀವು ವಯಸ್ಸಿನಲ್ಲಿ ಇರುವಂತಹ ಸಂದರ್ಭದಲ್ಲಿ ಕಾರ್ಮಿಕರಾಗಿ, ರೈತರಾಗಿ, ಸರ್ಕಾರಿ ನೌಕರರಾಗಿ ವಿವಿಧ ರೀತಿಯ ಕೆಲಸಗಳನ್ನು ಮಾಡುವುದರ ಮೂಲಕ ಈ ದೇಶಕ್ಕೆ ಸೇವೆ ಸಲ್ಲಿಸಿ ದೇಶದ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವನ್ನು ನೀಡಿದ್ದೀರಿ ನಿಮಗೆ ಗೌರವ ನೀಡುವಂಥದ್ದು ನಮ್ಮ ಕರ್ತವ್ಯ ಎಂದರು.

ದೇಶದಲ್ಲಿರುವಂತಹ ಯಾವುದೇ ಬಡವರು ಸಹ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಇನ್ನು ಮೂರು ತಿಂಗಳ ಕಾಲ ಉಚಿತ ಅಕ್ಕಿ ವಿತರಣೆಗೆ ಕ್ರಮ ಕೈಗೊಂಡಿದೆ ಎಂದರು.
ಕಂದಾಯ ಅಧಿಕಾರಿ ವರ್ಗದವರು ಮನೆ ಮನೆಗೆ ಭೇಟಿ ನೀಡಿ ಯಾರು ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬುದನ್ನ ಗುರುತಿಸಿ ಅಂತಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.
ಪಿಂಚಣಿ ಅದಾಲತ್‍ನಲ್ಲಿ ಇಂದಿರಾಗಾಧಿ ವೃದಾಪ್ಯ ವೇತನ 71, ಅಂಗವಿಕಲ 15, ವಿಧವಾ ವೇತನ 25, ಹಿರಿಯ ನಾಗರಿಕರ ಪಿಂಚಣಿ 47, ಒಟ್ಟು 164 ಪಿಂಚಣಿ  ಆದೇಶ ಪತ್ರಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸತ್ಯನಾರಾಯಣ್, ಗ್ರೇಡ್-2 ತಹಶೀಲ್ದಾರ್ ಫಾತಿಮಾ, ಕಂದಾಯ ಅಧಿಕಾರಿ ಶರಣಪ್ಪ, ಮಮತಾ, ಗ್ರಾಮ ಲೆಕ್ಕಾಧಿಕಾರಿ ಪಾಂಡುರಂಗಪ್ಪ, ತಾಲ್ಲೂಕು ಕಚೇರಿಯ ಸಿಬ್ಬಂದಿಗಳು ಹಾಗೂ ಹಿರಿಯ ನಾಗರೀಕರು ಇದ್ದರು.

ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

ರೇವಣ್ಣ ಬಂಧನದ ಬೆನ್ನಲ್ಲೇ ದೂರು ನೀಡಲು ಬಂದ ಮೂವರು ಸಂತ್ರಸ್ತೆಯರು : ಮತ್ತಷ್ಟು ಸಂಕಷ್ಟ..!

ಬೆಂಗಳೂರು: ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೊಬ್ಬರು ದೂರು ನೀಡಿರುವುದು ಹಾಗೂ ಇನ್ನೊಬ್ಬ ಸಂತ್ರಸ್ತೆಯ ಮಗ ಕಿಡ್ನ್ಯಾಪ್ ಪ್ರಕರಣದಲ್ಲಿ ದೂರು

error: Content is protected !!