ನಾನು ರಾಜಕೀಯ ಮಾಡಲು ಬಯಸಿದರೆ, ಮೋದಿಯಿಂದ ಸಹ ಏನು ಮಾಡಲು ಸಾಧ್ಯವಿಲ್ಲ : ಬಿಜೆಪಿ ನಾಯಕಿ ಪಂಕಜಾ ಮುಂಡೆ..!

ಮುಂಬೈ: ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ ಪ್ರಧಾನಿ ಮೋದಿ ವಿರುದ್ಧವೇ ಹರಿಹಾಯ್ದಿದ್ದಾರೆ. ಅವರಿಂದ ಕೂಡ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹರಿಹಾಯ್ದಿದ್ದಾರೆ. ಜನರ ಮನಸ್ಸು ಮತ್ತು ಹೃದಯದಲ್ಲಿ ಆಡಳಿತ ನಡೆಸಬೇಕು ಎಂದು ತೀರ್ಮಾನಿಸಿದರೆ ಪ್ರಧಾನಿ ಮೋದಿ ಕೈನಿಂದ ಕೂಡ ಏನು ಮಾಡುವುದಕ್ಕೆ ಸಾಧ್ಯವಿಲ್ಲ. ನನ್ನ ರಾಜಕೀಯ ಭವಿಷ್ಯವನ್ನು ಮುಗಿಸುವುದಕ್ಕೆ ಆಗಲ್ಲ ಎಂದಿದ್ದಾರೆ.

ಕಾಂಗ್ರೆಸ್ ನಲ್ಲಿ ರಾಜವಂಶದ ರಾಜಕೀಯ ಚಾಲ್ತಿಯಲ್ಲಿದೆ. ಪ್ರಧಾನಿ ಮೋದಿ ಹೇಗಾದರೂ ಮಾಡಿ ರಾಜವಂಶಸ್ಥ ಆಡಳಿತವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಾರೆ. ನಾನು ಕೂಡ ಪಾರಂಪರಿಕ ರಾಜವಂಶಸ್ಥ ಕುಟುಂಬದಿಂದ ಬಂದಿರುವುದು. ಪ್ರಧಾನಿ ಮೋದಿ ನನ್ನಂತಹ ವಂಶಪಾರಂಪರಿಕ ರಾಜಕಾರಣಿಗಳನ್ನು ಕೊನೆಗೊಳಿಸಲು ಯತ್ನಿಸುತ್ತಾರೆ ಎಂದು ಖಾರವಾಗಿ ಉತ್ತರಿಸಿದ್ದಾರೆ.

ಇನ್ನು ಇದೇ ವೇಳೆ ಪ್ರಧಾನಿ ಮೋದಿ ಬಗ್ಗೆ ಪಂಕಜಾ ಮುಂಡೆ ಪಾಸಿಟಿವ್ ಆಗಿಯೂ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲಾ ಕಠಿಣ ಸವಾಲುಗಳನ್ನು ಗೆದ್ದಿದ್ದಾರೆ. ಶಾಲೆಯಲ್ಲಿದ್ದಾಗ ಸಮವಸ್ತ್ರ ಖರೀದಿ ಮಾಡುವುದಕ್ಕೂ ಅವರ ಬಳಿ ಹಣವಿರಲಿಲ್ಲ. ಆದರೆ ಈಗ ಈ ಮಟ್ಟಕ್ಕೆ ಅವರು ಏರಿರುವುದು ಸಾಧನೆ ಎಂದು ಹೊಗಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *