ದೇಶದ್ರೋಹಿ ಕೆಲಸ ಮಾಡುತ್ತಿದ್ದ ಕಾರಣ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ 5 ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೆ ಕೇರಳದ KSRTC ಸಂಸ್ಥೆ ಪಿಎಫ್ಐ ಸಂಘಟನೆ ಮೇಲೆ ಪರಿಹಾರ ನೀಡಲು ಹೈಕೋರ್ಟ್ ಮೊರೆ ಹೋಗಿದೆ.
ಎನ್ಐಎ ಇತ್ತಿಚೆಗೆ ಪಿಎಫ್ ಸಂಘಟನೆಗೆ ಸಂಬಂಧಿಸಿದಂತೆ ಮುಖಂಡರ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ದೇಶದ್ರೋಹ ಕೆಲಸ ಮಾಡಲು ಫ್ಲ್ಯಾನ್ ಮಾಡಿದ್ದಂತ ಸಾಕ್ಷಿಗಳೆಲ್ಲಾ ಸಿಕ್ಕಿದೆ. ಹಲವರನ್ನು ಬಂಧಿಸಿ ವಿಚಾರಣೆಗೆ ಕೂಡ ಒಳಪಡಿಸಲಾಗಿದೆ. ದಾಳಿಯನ್ನು ಖಂಡಿಸಿ ಕೇರಳದಲ್ಲಿ ಪಿಎಫ್ಐ ಸಂಘಟನೆ ಸೆಪ್ಟೆಂಬರ್ 23ರಂದು ಕೇರಳ ಬಂದ್ ಗೆ ಕರೆ ನೀಡಿತ್ತು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಸಾಕಷ್ಟು ನಷ್ಟ ಸಂಭವಿಸಿದೆ.
ಪ್ರತಿಭಟನೆ ವೇಳೆ 70 ಕೆಎಸ್ಆರ್ಟಿಸಿ ಬಸ್ ಗಳಿಗೆ ಹಾನಿಯಾಗಿದೆ. ಬಸ್ಸಿಗೆ ಕಲ್ಲು ತೂರಾಟ ನಡೆಸಿ, ಕಿಟಕಿಗಳು, ಗಾಜು ಪುಡಿ ಪುಡಿಯಾಗಿದೆ. ಜೊತೆಗೆ ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ. ಈ ಸಂಬಂಧ ಕೆಎಸ್ಆರ್ಟಿಸಿ ಅಲ್ಲಿ ಹೈಕೋರ್ಟ್ ಮೊರೆ ಹೋಗಿದ್ದು, 5 ಕೋಟಿ ಪರಿಹಾರ ನೀಡಲು ಒತ್ತಾಯಿಸಿದೆ.